ಮೈಸೂರು: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಡಿರುವ ಎನ್‌ಆರ್‌ಸಿ ಹಾಗೂ ಪೌರತ್ವ ಕಾಯ್ದೆ ಅನವಶ್ಯಕವಷ್ಟೇ ಅಲ್ಲ ಕ್ರೂರವಾಗಿದೆ ಎಂದು ಗಾಂಧೀಜಿ ಮೊಮ್ಮಗ ರಾಜಮೋಹನ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಗಾಂಧಿ ವಿಚಾರ ಪರಿಷತ್ ವತಿಯಿಂದ ಅರವಿಂದ ನಗರದಲ್ಲಿ ಏರ್ಪಡಿಸಿದ್ದ 'ಮಾಧ್ಯಮ: ಪ್ರಜಾಸತ್ತತೆ ರಾಷ್ಟ್ರೀಯ ವಿಚಾರ ಸಂಕಿರಣ'ಕ್ಕೆ ರಾಜ ಮೋಹನ ಗಾಂಧಿ ಆಗಮಿಸಿದ್ದರು.
ದೇಶದಲ್ಲಿ ವಾಸಿಸುವ ಪ್ರಜೆಗಳಿಗೆ ಎನ್‌ಆರ್‌ಸಿ ಹಾಗೂ ಸಿಎಎ ಅಗತ್ಯವಿಲ್ಲ. ಯಾಕಂದ್ರೆ ಅವರೆಲ್ಲ ಹುಟ್ಟುತ್ತಲೇ ಈ ದೇಶದ ಹಕ್ಕು ಪಡೆದಿದ್ದಾರೆ. ಅನಗತ್ಯ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.