ETV Bharat / city

ಮೂರು ಪಕ್ಷಗಳಲ್ಲಿ ತತ್ವ, ಸಿದ್ಧಾಂತ ಉಳಿದಿಲ್ಲ : ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ - ಮೈಸೂರು ಲೇಟೆಸ್ಟ್ ನ್ಯೂಸ್

ನೀವು ಹಿರಿಯರಿದ್ದೀರಿ, ನಿಮಗೆ ಸಾಕಷ್ಟು ಅನುಭವಗಳಾಗಿದೆ. ಮುಖ್ಯ ಮಂತ್ರಿಗಳಾಗಿದ್ದೀರಿ, ಮಂತ್ರಿಗಳಾಗಿದ್ದೀರಿ. ನೀವು ಜನರಿಗೆ ಹೆದರಬೇಕು. ರಾಜಕಾರಣದಲ್ಲಿ ಮಂಥರೆ ಅಂತಹವರು ಜಾಸ್ತಿ ಜನ ಇದ್ದಾರೆ..

g t devegowda
ಶಾಸಕ ಜಿ.ಟಿ. ದೇವೇಗೌಡ
author img

By

Published : Oct 20, 2021, 2:38 PM IST

ಮೈಸೂರು : ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ತತ್ವ, ಸಿದ್ಧಾಂತ ಉಳಿದಿಲ್ಲ. ಎಲ್ಲರೂ ಒಂದಾಗಿದ್ದಾರೆ. ಇಲ್ಲಿದ್ದವರು ಅಲ್ಲಿಗೆ ಹೋಗಿದ್ದಾರೆ. ಮಾತನಾಡುವಾಗ ಇದನ್ನು ಯೋಚನೆ ಮಾಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹೇಳಿದರು.

ಮಾಜಿ ಸಿಎಂಗಳಿಬ್ಬರಿಗೆ ಶಾಸಕ ಜಿ ಟಿ ದೇವೇಗೌಡ ಸಲಹೆ ನೀಡಿರುವುದು..

ಮಾಜಿ ಸಿಎಂಗಳ ವಾಕ್ ಸಮರ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಬಾಯಿಂದ ಏಕವಚನ ಬಂದರೆ ಜನ ಅದನ್ನು ಗಮನಿಸುತ್ತಾರೆ. ಹಿರಿತನ ಹೆಚ್ಚಾಗುತ್ತಿದ್ದಂತೆ ಹೆಚ್ಚಿನ ಗೌರವಕ್ಕೆ ಪಾತ್ರರಾಗಬೇಕು ಎಂದು ಇಬ್ಬರು ಮಾಜಿ ಸಿಎಂಗಳಿಗೆ ಸಲಹೆ ನೀಡಿದರು.

ಇದನ್ನೂ ಓದಿ: ಮನೆಗಳ ಮೇಲೆ ಪಾರಿವಾಳ ಹಾರಿಸಿ ಡ್ರಾಮಾ.. ಹಕ್ಕಿ ಹಿಡಿಯವ ನೆಪದಲ್ಲಿ ಕನ್ನ ಹಾಕ್ತಿದ್ದ ಬ್ಯಾಡ್​ ನಾಗ ಅರೆಸ್ಟ್​

ನೀವು ಹಿರಿಯರಿದ್ದೀರಿ, ನಿಮಗೆ ಸಾಕಷ್ಟು ಅನುಭವಗಳಾಗಿದೆ. ಮುಖ್ಯ ಮಂತ್ರಿಗಳಾಗಿದ್ದೀರಿ, ಮಂತ್ರಿಗಳಾಗಿದ್ದೀರಿ. ನೀವು ಜನರಿಗೆ ಹೆದರಬೇಕು. ರಾಜಕಾರಣದಲ್ಲಿ ಮಂಥರೆ ಅಂತಹವರು ಜಾಸ್ತಿ ಜನ ಇದ್ದಾರೆ.

ಮನೆ‌ಮನೆಗಳಲ್ಲೂ ಮಂಥರೆ ಪಾತ್ರ ಮಾಡುವವರು ಇದ್ದಾರೆ. ಇದರ ಬಗ್ಗೆ ಯಾರಿಗೂ ಅರಿವಿಲ್ಲ ಎಂದರು. ಪರಸ್ಪರ ಟೀಕೆ ಮಾಡಿದ್ರೆ ಜನ ಅವರ ಕೈ ಬಿಟ್ಟು ಬಿಡುತ್ತಾರೆ ಅಂತಾ ಅಂದುಕೊಂಡಿದ್ದಾರೆ. ಆದ್ರೆ, ಒಳ್ಳೆ ಆಡಳಿತ ಯಾರು ನಡೆಸಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.