ETV Bharat / city

ನಾಮಪತ್ರ ವಾಪಸ್​​ ಪಡೆದ ಸ್ವಾಮೀಜಿ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು? - ನಾಮಪತ್ರ ವಾಪಾಸ್ ಪಡೆದ ಸ್ವಾಮೀಜಿ

ಸ್ವಾಮೀಜಿ ಅವರ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದು ಅಧಿಕಾರ ದುರುಪಯೋಗ ಹಾಗೂ ಜಾತಿ ವ್ಯವಸ್ಥೆಯ ರಾಜಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
author img

By

Published : Nov 21, 2019, 1:30 PM IST

ಮೈಸೂರು: ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಂಸದ ರಾಘವೇಂದ್ರ ಅವರು ಕುಳಿತುಕೊಂಡು ಪಂಚಾಯತಿ ನಡೆಸಿ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಇದು ಅಧಿಕಾರ ದುರುಪಯೋಗ ಹಾಗೂ ಜಾತಿ ವ್ಯವಸ್ಥೆಯ ರಾಜಕಾರಣ ಅಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಹಲ್ಲೆಗೊಳಗಾಗಿದ್ದ ಶಾಸಕ ತನ್ವೀರ್ ಸೇಠ್ ಭೇಟಿ ಬಳಿಕ ಮಾತನಾಡಿದ ಅವರು, ರಂಭಾಪುರಿ‌ ಸ್ವಾಮೀಜಿ, ಉಜ್ಜಯಿನಿ ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಪುತ್ರ ಸೇರಿ ಸಭೆ ನಡೆಸಿ ಮಠಾಧೀಶರ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ. ನಾವು ಮಠಾಧೀಶರ ಬಳಿ ಹೋಗಿ ಟಿಕೆಟ್ ಕೊಟ್ಟಿಲ್ಲ. ಅವರೇ ಕರೆ ಮಾಡಿ ಜೆಡಿಎಸ್​​ನಿಂದ ಸ್ಪರ್ಧಿಸುವುದಾಗಿ ತಿಳಿಸಿದರು. ಆದ್ದರಿಂದ ಬಿ ಫಾರಂ ಕಳುಹಿಸಿಕೊಟ್ಟೆ. ಆ ನಂತರ ಇದೆಲ್ಲಾ ನಡೆದಿದೆ ಎಂದು ವಿವರಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಬೆಳಗಾವಿಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಮತದಾರರು ನೋಡುತ್ತಿದ್ದಾರೆ. ಬುಧವಾರ ಕೆ.ಆರ್.ಪೇಟೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ 8 ಸ್ಥಾನ ಬರದಿದ್ದರೆ ಕಷ್ಟ ಎಂದು ಹೇಳಿದ್ದಾರೆ. ನೆರೆ ಹಾವಳಿಯಲ್ಲೂ ಇಂತಹ ಕಸರತ್ತು, ಚುನಾವಣೆ ಬೇಕಿತ್ತಾ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಕಡಿಮೆ ಸೀಟು ಬಿಜೆಪಿಗೆ ಬಂದರೆ ಮುಂದೆ ಆಗಲಿರುವ ಬೆಳವಣಿಗೆ ಕುರಿತು ಫಲಿತಾಂಶದ ಬಳಿಕ ಹೇಳುತ್ತೇನೆ ಎಂದ ಅವರು, ಜೆಡಿಎಸ್ 1 ಸ್ಥಾನವನ್ನೂ ಗೆಲ್ಲುವುದಿಲ್ಲ ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಿಲ್ಲ ಎಂದರು.

ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಅವರು ಮುಕ್ತವಾಗಿ ನಮ್ಮ ಅಭ್ಯರ್ಥಿಯ ಪರ ಕೆಲಸ ಮಾಡುವುದಿದ್ದರೆ ಸ್ವಾಗತ. ಸದ್ಯಕ್ಕೆ ವೈಯಕ್ತಿಕವಾಗಿ ಭೇಟಿ ಮಾಡುವುದಿಲ್ಲ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಜಾಪ್ರಭುತ್ವ ಬುಡಮೇಲು ಮಾಡಲು ಹೊರಟ 15 ಕ್ಷೇತ್ರಗಳ ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ ಎಂದರು.

Intro:ಮೈಸೂರು: ಸ್ವಾಮೀಜಿಗಳು, ಸಿಎಂ ಪುತ್ರ ಕುಳಿತುಕೊಂಡು ಪಂಚಾಯತಿ ಮಾಡಿ ನಾಮ ಪತ್ರ ವಾಪಾಸ್ ಪಡೆದಿರುವುದು ಅಧಿಕಾರ ದುರುಪಯೋಗ ಹಾಗೂ ಜಾತಿ ವ್ಯವಸ್ಥೆಯ ಎಂದು ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

Body:ಇಂದು ಹಲ್ಲೆಗೊಳಗಾಗಿದ್ದ ತನ್ವೀರ್ ಸೇಠ್ ಭೇಟಿ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ‌ ಸಿಎಂ ಕುಮಾರಸ್ವಾಮಿ, ರಂಭಾಪುರಿ‌ ಸ್ವಾಮೀಜಿ, ಉಜ್ಜಯಿನಿ ಸ್ವಾಮೀಜಿ, ಸಿಎಂ ಪುತ್ರ ಕೂತು ಪಂಚಾಯತಿ ಮಾಡಿಕೊಂಡು ಮಠಾಧೀಶರ ನಾಮ ಪತ್ರವನ್ನು ವಾಪಸ್ ತೆಗೆದಿದ್ದಾರೆ. ‌ಇದು ಅಧಿಕಾರ ದುರುಪಯೋಗ ಅಲ್ಲವೇ, ಜಾತಿ ವ್ಯವಸ್ಥೆಯ ಒತ್ತಡ ಅಲ್ಲವೆ ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ ನಾವೇನು ಮಠಾಧೀಶರ ಬಳಿ ಹೋಗಿ ಟಿಕೆಟ್ ಕೊಟ್ಟಿಲ್ಲ, ಅವರೇ ನನಗೆ ಕರೆ ಮಾಡಿ ನಿಮ್ಮ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದರು ಬಿ ಫಾರಂ ಕಳುಹಿಸಿಕೊಟ್ಟೆ ಆ ನಂತರ ಇದೆಲ್ಲಾ ನಡೆದಿದೆ.
ಬೆಳಗಾವಿಯಲ್ಲಿ ಏನೆಲ್ಲಾ ನಡೆಯುತ್ತಿದೆ ಅದನ್ನು ಜನ ನೋಡುತ್ತಿದ್ದಾರೆ ಎಂದ ಹೆಚ್.ಡಿ.ಕೆ.
ನೆನ್ನೆ ಕೆ.ಆರ್.ಪೇಟೆಯಲ್ಲಿ ಯಡಿಯೂರಪ್ಪ ಬಿಜೆಪಿಗೆ ೮ ಸ್ಥಾನ ಬರದಿದ್ದರೆ ಕಷ್ಟ ಎಂದು ಹೇಳಿದ್ದಾರೆ. ರಾಜ್ಯದ ನೆರೆ ಹಾವಳಿಯಲ್ಲೂ ಇಂತಹ ಕಸರತ್ತು, ಚುನಾವಣೆ ಬೇಕಿತ್ತಾ ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಇನ್ನೂ ಕಡಿಮೆ ಸೀಟು ಬಿಜೆಪಿಗೆ ಬಂದರೆ ಚುನಾವಣೆಯ ನಂತರ ಏನು ಬೆಳವಣಿಗೆ ಆಗುತ್ತದೆ ಎಂಬುದನ್ನು ಫಲಿತಾಂಶದ ನಂತರ ನಾನು ಹೇಳುತ್ತೇನೆ ಎಂದ ಅವರು, ಜೆಡಿಎಸ್ ೧ ಸ್ಥಾನವನ್ನೂ ಗೆಲ್ಲುವುದಿಲ್ಲ ಎಂಬ ಸಿದ್ದು ಹೇಳಿಕೆಗೆ ನನಗೆ ಕಾಂಗ್ರೆಸ್ ಅವರ ಸರ್ಟಿಫಿಕೇಟ್ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ ಕುಮಾರಸ್ವಾಮಿ.
ನಾನು ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ, ಅವರು ಮುಕ್ತವಾಗಿ ನಮ್ಮ ಅಭ್ಯರ್ಥಿಯ ಪರ ಕೆಲಸ ಮಾಡುವುದಿದ್ದರೆ ಸ್ವಾಗತ ನಾನು ವೈಯಕ್ತಿಕವಾಗಿ ಸದ್ಯ ಭೇಟಿ ಮಾಡುವುದಿಲ್ಲ, ಎಂದರು.
ನಾವು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಜಾಪ್ರಭುತ್ವವನ್ನು ಬುಡಮೇಲು ಹೊರಟ ೧೫ ಕ್ಷೇತ್ರಗಳ ಅನರ್ಹರನ್ನು ಸೋಲಿಸುವುದೆ ನಮ್ಮ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.