ಮೈಸೂರು: ಫಿರಂಗಿ ತಾಲೀಮಿನ ಶಬ್ಧಕ್ಕೆ ಗಜಪಡೆ ಬೆಚ್ಚುತ್ತಿರುವುದರಿಂದ, ಅವುಗಳು ಹೆದರಂತೆ ಪಟಾಕಿ ಸಿಡಿಸಿ ಪ್ರಾಕ್ಟೀಸ್ ಮಾಡಿಸಲಾಯಿತು.
ಅರಮನೆ ಹೊರಾವರಣದಲ್ಲಿ ಇಂದು ಮೂರನೇ ಹಾಗೂ ಕೊನೆಯ ಹಂತದ ಕುಶಾಲತೋಪು ತಾಲೀಮು ನೀಡಲಾಗುವುದು. ತಾಲೀಮಿಗೂ ಮುನ್ನ ಕುಶಾಲತೋಪಿಗೆ ಬೆದರುವ ಆನೆಗಳಿಗೆ ಪಟಾಕಿ ಸಿಡಿಸಿ ಅಭ್ಯಾಸ ಮಾಡಿಸಲಾಯಿತು.
ಇದನ್ನೂ ಓದಿ: ಕಳೆಗಟ್ಟಿದ ಸಂಪ್ರದಾಯ ದಸರಾ,ಅರಮನೆ ಖಾಸಗಿ ದರ್ಬಾರ್ ಸೊಬಗು
ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ ಹಾಗೂ ಲಕ್ಷ್ಮಿ ಆನೆಗಳ ಮುಂದೆ ಪಟಾಕಿ ಸಿಡಿಸಿ ಅವುಗಳು ಹೆದರಂತೆ ಧೈರ್ಯ ತುಂಬಲಾಯಿತು. ಎರಡನೇ ಬಾರಿ ಕುಶಾಲತೋಪು ತಾಲೀಮಿನಲ್ಲಿ ಗೋಪಾಲಸ್ವಾಮಿ, ಅಶ್ವತ್ಥಾಮ ಆನೆಗಳು ಬೆಚ್ಚಿದವು. ಹಾಗಾಗಿ ಫಿರಂಗಿ ತಾಲೀಮಿಗೂ ಮುನ್ನ ಪಟಾಕಿ ಸಿಡಿಸಿ ಬೆದರದಂತೆ ಪಶು ವೈದ್ಯ ರಮೇಶ್ ನೇತೃತ್ವದಲ್ಲಿ ಆನೆಗಳಿಗೆ ಪಟಾಕಿ ಪ್ರಾಕ್ಟೀಸ್ ಮಾಡಿಸಲಾಯಿತು.