ಮೈಸೂರು: ಅಗ್ನಿ ಅವಘಡದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವನ್ನಪ್ಪಿ, ಆತನ ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ನಂದಿನಿ ಬಡಾವಣೆಯಲ್ಲಿ ನಡೆದಿದೆ.
ಪತಿ ಶಿವಣ್ಣ ಸಾವನ್ನಪ್ಪಿದ್ದರೆ ಪತ್ನಿ ನಾಗಮ್ಮ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯಗಳ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಬೆಳಗ್ಗೆ ನೀರು ಕಾಯಿಸಲು ಶಿವಣ್ಣ ಒಲೆ ಹಚ್ಚುವಾಗ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿತ್ತು.
ಈ ವೇಳೆ ಪತ್ನಿಯನ್ನು ಬಚಾವ್ ಮಾಡಲು ಬಂದ ಪತ್ನಿ ನಾಗಮ್ಮ ಅವರಿಗೂ ಗಂಭೀರವಾಗಿ ಗಾಯವಾಗಿದೆ. ಬೆಂಕಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನೂ ಸ್ಥಳೀಯರು ರಕ್ಷಣೆ ಮಾಡಿ, ಗಾಯಗೊಂಡ ದಂಪತಿಯನ್ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ವ್ಯಕ್ತಿ ಆತ್ಮಹತ್ಯೆಗೆ ಶರಣು: ಪತಿ ಸತ್ತು 3 ದಿನಗಳಾದರೂ ಮಾಹಿತಿ ನೀಡದ ಪತ್ನಿ
ಚಿಕಿತ್ಸೆ ಫಲಕಾರಿಯಾಗದೇ ಶಿವಣ್ಣ ಸಾವನ್ನಪ್ಪಿದ್ದರೆ, ನಾಗಮ್ಮರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.