ಮೈಸೂರು: ಮಾನವ, ವನ್ಯಜೀವಿ ಸಂಘರ್ಷ ಆಗಾಗ ನಡೆಯುತ್ತಿರುತ್ತದೆ. ಆದರೆ ಇಲ್ಲಿರುವ ದೃಶ್ಯ ಮಾನವ ಹಾಗೂ ವನ್ಯಜೀವಿಯ ಅನ್ಯೋನ್ಯ ಸಂಬಂಧವನ್ನು ಸೂಚಿಸುತ್ತಿದೆ. ಇದಕ್ಕೆ ಮೈಸೂರು ಮೃಗಾಲಯ ಸಾಕ್ಷಿಯಾಗಿದೆ.
ಎರಡೂವರೆ ತಿಂಗಳ ಹಿಂದೆ ಸಿಕ್ಕ ಹೆಣ್ಣು ಆನೆ ಮರಿಯನ್ನು ಸೋಮು ಎಂಬಾತ ತಂದು ಮೈಸೂರು ಮೃಗಾಲಯದಲ್ಲಿ ಆರೈಕೆ ಮಾಡುತ್ತಿದ್ದಾನೆ. ಅಷ್ಟು ಮಾತ್ರವಲ್ಲ, ಜಾಣ್ಮೆಯಿಂದ ಪ್ರಾಣಿ ಭಾಷೆಯಲ್ಲೇ ಆನೆ ಮರಿಯನ್ನು ಪಳಗಿಸುತ್ತಿದ್ದು, ವೇದಾವತಿ ಎಂದು ಹೆಸರಿಟ್ಟಿದ್ದಾನೆ.
ಪ್ರತಿನಿತ್ಯ 3 ಬಾರಿ ವಾಕ್‌ಗೆ ಕರೆದುಕೊಂಡು ಹೋಗುವ ಸೋಮುವನ್ನು ಕಂಡರೆ ವೇದಾವತಿಗೆ ಅಚ್ಚುಮೆಚ್ಚು. ಸೋಮುವನ್ನು ಬಿಟ್ಟರೆ ಬೇರೆ ಯಾರನ್ನೂ ಕೂಡಾ ಆನೆ ಮರಿ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಫೀಡಿಂಗ್ ಬಾಟಲ್ನಿಂದ ಹಾಲು ಕುಡಿಸುವುದು, ಆಹಾರ ತಿನ್ನಿಸೋದು ಸೋಮುವಿನ ಪ್ರತಿದಿನದ ಕಾಯಕವಾಗಿದೆ.
-
#Vedavathi lives walking and running, #Somu takes around three times in a day. Look how she runs!!
— Zoos of Karnataka (@ZKarnataka) July 13, 2020 " class="align-text-top noRightClick twitterSection" data="
She was 89 kgs , when arrived now 110kgs, gained any 20kgs in two months.@aranya_kfd @CZA_Delhi @AnandSinghBS @KarnatakaWorld @PIBBengaluru pic.twitter.com/PFPlpFshWi
">#Vedavathi lives walking and running, #Somu takes around three times in a day. Look how she runs!!
— Zoos of Karnataka (@ZKarnataka) July 13, 2020
She was 89 kgs , when arrived now 110kgs, gained any 20kgs in two months.@aranya_kfd @CZA_Delhi @AnandSinghBS @KarnatakaWorld @PIBBengaluru pic.twitter.com/PFPlpFshWi#Vedavathi lives walking and running, #Somu takes around three times in a day. Look how she runs!!
— Zoos of Karnataka (@ZKarnataka) July 13, 2020
She was 89 kgs , when arrived now 110kgs, gained any 20kgs in two months.@aranya_kfd @CZA_Delhi @AnandSinghBS @KarnatakaWorld @PIBBengaluru pic.twitter.com/PFPlpFshWi
ಇಲ್ಲಿಯವರೆಗೆ ಮೃಗಾಲಯದಲ್ಲಿ 5 ಆನೆ ಮರಿಗಳು ಬಂದಿದ್ದು, ಅವುಗಳನ್ನೂ ಸೋಮು ಆರೈಕೆ ಮಾಡಿದ್ದಾನೆ. ಅದರಲ್ಲಿ ಐಶ್ವರ್ಯ, ಮಾದೇಶ, ಕೊಳ್ಳೇಗಾಲ, ಚಾಮುಂಡಿ ಈಗ ಎತ್ತರಕ್ಕೆ ಬೆಳೆದಿದ್ದು, ವೇದಾವತಿಯೇ ಅತಿ ಚಿಕ್ಕ ಆನೆ ಮರಿಯಾಗಿದೆ.