ETV Bharat / city

ಸುತ್ತೂರಿನ ಗದ್ದುಗೆಗೆ ಭೇಟಿ ನೀಡಲಿರುವ ಡಿಕೆಶಿ - ಡಿ.ಕೆ.ಶಿವಕುಮಾರ್​

ಮೈಸೂರಿನಲ್ಲಿರುವ ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇಲ್ಲದ ಕಾರಣ ಡಿ.ಕೆ.ಶಿವಕುಮಾರ್​ ಮಠ ಭೇಟಿ ಕಾರ್ಯಕ್ರಮ ರದ್ದಾಗಿದ್ದು, ಸಂಜೆ 4 ಗಂಟೆಗೆ ಸುತ್ತೂರಿನಲ್ಲಿರುವ ಗದ್ದುಗೆಗೆ ಭೇಟಿ ನೀಡಲಿದ್ದಾರೆ.

ಡಿ.ಕೆ.ಶಿವಕುಮಾರ್
author img

By

Published : Nov 7, 2019, 12:23 PM IST

Updated : Nov 7, 2019, 2:20 PM IST

ಮೈಸೂರು: ನಗರದಲ್ಲಿರುವ ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇಲ್ಲದ ಕಾರಣ ಡಿ.ಕೆ.ಶಿವಕುಮಾರ್​ ಮಠ ಭೇಟಿ ಕಾರ್ಯಕ್ರಮ ರದ್ದಾಗಿದ್ದು, ಸಂಜೆ 4 ಗಂಟೆಗೆ ಸುತ್ತೂರಿನಲ್ಲಿರುವ ಗದ್ದುಗೆಗೆ ಭೇಟಿ ನೀಡಲಿದ್ದಾರೆ.

ಡಿ.ಕೆ.ಶಿವಕುಮಾರ್ 2 ದಿನ ಮೈಸೂರು ಮತ್ತು ಮಂಡ್ಯದಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದು ಮಧ್ಯಾಹ್ನ ಬೆಂಗಳೂರಿನಿಂದ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರು ರೈಲ್ವೆ ನಿಲ್ದಾಣಕ್ಕೆ ಮಧ್ಯಾಹ್ನ 1 ಗಂಟಗೆ ತಲುಪಲಿದ್ದು, ಅಲ್ಲಿಂದ ಕಾಂಗ್ರೆಸ್ ಭವನದವರೆಗೆ ಡಿಕೆಶಿಯನ್ನ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ನಂತರ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಅವರು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಹಾಗೂ ಮಠದಲ್ಲಿರುವ ದೇವಾಲಯಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮವಿತ್ತು.

ಆದರೆ, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉತ್ತರ ಕರ್ನಾಟಕ ಪ್ರವಾಸದಲ್ಲಿ ಇರುವುದರಿಂದ ಮಠಕ್ಕೆ ಡಿಕೆಶಿ ಭೇಟಿ ನೀಡದೆ, ಸುತ್ತೂರಿನಲ್ಲಿರುವ ಗದ್ದುಗೆಗೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಶ್ರೀಗಳ ಜೊತೆ ಡಿ.ಕೆ.ಶಿವಕುಮಾರ್ ಫೋನ್​ನಲ್ಲಿ ಮಾತಾನಾಡಿದ್ದಾರೆ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.

Intro:ಮೈಸೂರು: ಡಿ.ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ೨ ದಿನದ ಭೇಟಿಗಾಗಿ ಆಗಮಿಸುತ್ತಿದ್ದು , ಶ್ರೀಗಳು ಮಠದಲ್ಲಿ ಇಲ್ಲದ ಕಾರಣ ಸುತ್ತೂರು ಭೇಟಿ ರದ್ದಾಗಿದೆ.Body:

ಡಿಕೆಶಿ ೨ ದಿನದ ಮೈಸೂರು, ಮಂಡ್ಯ ಭೇಟಿಗಾಗಿ ಇಂದು ಮಧ್ಯಾಹ್ನ ಬೆಂಗಳೂರಿನಿಂದ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ೧ ಗಂಟೆಗೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಅವರು ರೈಲ್ವೆ ನಿಲ್ದಾಣದಿಂದ ಕಾಂಗ್ರೆಸ್ ಭವನದವರೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತಿದ್ದು , ನಂತರ ಮಧ್ಯಾಹ್ನ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದು ನಂತರ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿ ಮಠದಲ್ಲಿ ಶ್ರೀಗಳ ದರ್ಶನ ಹಾಗೂ ಮಠದಲ್ಲಿರುವ ದೇವಾಲಯಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಇತ್ತು ಆದರೆ ಶ್ರೀಗಳಾದ ಶಿವರಾತ್ರಿ ದೇಶಿಕ್ ಕೇಂದ್ರ ಮಹಾಸ್ವಾಮಿಗಳು ಉತ್ತರ ಕರ್ನಾಟಕ ಪ್ರವಾಸದಲ್ಲಿ ಇರುವುದರಿಂದ ಅವರು ವಾಪಸ್ ಇದೇ ತಿಂಗಳು ೧೦ ಕ್ಕೆ ಬರುವುದರಿಂದ ಶ್ರೀಗಳ ಭೇಟಿ ರದ್ದು ಮಾಡಲಾಗಿದೆ. ಈ ಬಗ್ಗೆ ಶ್ರೀಗಳ ಜೊತೆ ಡಿ.ಕೆ ಶಿವಕುಮಾರ್ ಫೋನ್ ನಲ್ಲಿ ಮಾತಾನಾಡಿದ್ದಾರೆ ಎಂದು ಮಠದ ಮೂಲಕ ಖಚಿತ ಪಡಿಸಲಾಗಿದೆ.Conclusion:
Last Updated : Nov 7, 2019, 2:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.