ಮೈಸೂರು: ಚಾಮುಂಡಿ ಬೆಟ್ಟಕ್ಕೆ ತೆರಳುವ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿ ವಿಐಪಿ ಪಾಸ್ಗಳನ್ನು ರದ್ದು ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾರಿಗೆ ಬಸ್‌ನಲ್ಲೇ ಬಂದು ಆಷಾಢ ಶುಕ್ರವಾರ ದೇವಿಯ ದರ್ಶನ ಪಡೆದರು. ಲಲಿತಮಹಲ್ ಹೆಲಿಪ್ಯಾಡ್ ಬಳಿ ತಾತ್ಕಾಲಿಕ ಸಾರಿಗೆ ಬಸ್ ನಿಲ್ದಾಣ ಮಾಡಲಾಗಿದ್ದು ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ಸಾರಿಗೆ ಬಸ್ನಲ್ಲಿ ಹೋಗುವ ವ್ಯವಸ್ಥೆ ಮಾಡಲಾಗಿದೆ. ಈ ಬಸ್‌ನಲ್ಲೇ ಪ್ರಯಾಣಿಕರ ಜತೆ ಡಿ.ಕೆ.ಶಿವಕುಮಾರ್ ಬೆಟ್ಟಕ್ಕೆ ತೆರಳಿದರು. ಆರ್.ಧ್ರುವನಾರಾಯಣ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು.
ಅಧಿದೇವತೆ ದರ್ಶನಕ್ಕೆ ಜನಸಾಗರ: ಇಂದು ಬೆಳಗಿನ ಜಾವದಿಂದಲೇ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ವಿವಿಧ ಬಗೆಯ ಹೂಗಳಿಂದ ದೇವಾಲಯವನ್ನು ಅಲಂಕರಿಸಲಾಗಿದೆ. ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಮಹಾ ಮಂಗಳಾರತಿ ಮಾಡಲಾಗಿದ್ದು, ಮುಂಜಾನೆ 5:30 ರಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಇದನ್ನೂ ಓದಿ: 'ನಮಗೆ ರೊಕ್ಕ ಬ್ಯಾಡ್ರಿ, ನ್ಯಾಯ ಬೇಕು': ಸಿದ್ದರಾಮಯ್ಯರ ವಾಹನದತ್ತ ಪರಿಹಾರದ ಹಣ ಎಸೆದು ಮಹಿಳೆಯ ಆಕ್ರೋಶ