ಮೈಸೂರು: ಲಾಕ್ಡೌನ್ ನಡುವೆಯೂ ಕೆರೆಯಲ್ಲಿ ಈಜಲು ಹೋದ ಯುವಕ ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣದ ದೊಡ್ಡಕೆರೆಯಲ್ಲಿ ನಡೆದಿದೆ.
ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಯುವಕ ಗೌತಮ್ (23). ಈತ ತನ್ನ ಸ್ನೇಹಿತರೊಂದಿಗೆ ಬುಧವಾರ ಮಧ್ಯಾಹ್ನ ದೊಡ್ಡ ಕೆರೆಯಲ್ಲಿ ಈಜಲು ಹೋದಾಗ ಕೆರೆಯಲ್ಲಿ ನೀರಿನ ಸುಳಿ ಇರುವುದು ಗೊತ್ತಾಗದೆ ಅದರಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ.
ಈ ಸಂಭಂದ ಪಟ್ಟಣದ ಪೊಲೀಸರು ಸ್ಥಳಕ್ಕೆ ಆಗಮಿಸಿ, ನೀರಿನಿಂದ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಯುವಕನ ಶವವನ್ನು ಒಪ್ಪಿಸಿದ್ದಾರೆ.