ETV Bharat / city

Viral Video: ಆಸ್ತಿ ಮೇಲಿನ ವ್ಯಾಮೋಹ.. ಮೈಸೂರಲ್ಲಿ ಖಾಲಿ ಪತ್ರಕ್ಕೆ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು! - ಹೆಣದಿಂದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು

ಖಾಲಿ ಬಾಂಡ್ ಪೇಪರ್​ಗೆ ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ವಿಚಿತ್ರ ಮತ್ತು ಅಚ್ಚರಿ ಮೂಡಿಸುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

dead-bodys-thumb-impression-video-viral-in-mysuru
Viral Video: ಖಾಲಿ ಪತ್ರಕ್ಕೆ ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಕಿಲಾಡಿಗಳು
author img

By

Published : Nov 28, 2021, 1:43 PM IST

Updated : Nov 28, 2021, 3:52 PM IST

ಮೈಸೂರು: ಆಸ್ತಿಗಾಗಿ ಕುಟುಂಬಸ್ಥರು ಮಾನವೀಯತೆ ಮರೆತಿದ್ದು, ಆಸ್ತಿ ಕಬಳಿಸುವ ಸಲುವಾಗಿ ಖಾಲಿ ಬಾಂಡ್ ಪೇಪರ್ ಮೇಲೆ ಮೃತದೇಹದ ಹೆಬ್ಬೆಟ್ಟು ಒತ್ತಿಸಿಕೊಂಡ ಅಮಾನವೀಯ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ.

ಶ್ರೀರಾಂಪುರ ನಿವಾಸಿ ಜಯಮ್ಮ (63) ಹನ್ನೊಂದು ದಿನಗಳ ಹಿಂದೆ ವಯೋಸಹಜವಾಗಿ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಆಸ್ತಿ ಪಡೆಯಲು ಆಕೆ ಸತ್ತ ಬಳಿಕ ಆಸ್ತಿ ಕಬಳಿಸಲು ಸಂಬಂಧಿಕರು ಖಾಲಿ ಬಾಂಡ್ ಪೇಪರ್​ ಮೇಲೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಮೃತದೇಹದ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಸಂಬಂಧಿಗಳು

ಏನಿದು ಘಟನೆ ?:

ಜಯಮ್ಮನ ಕುಟುಂಬಕ್ಕೆ ಪಿರ್ತಾರ್ಜಿತವಾಗಿ 14 ಎಕರೆ ಆಸ್ತಿ ಇದೆ. ಜಯಮ್ಮ ಮದುವೆಯಾದ ಹೊಸದರಲ್ಲೇ ಪತಿಯಿಂದ ದೂರವಾಗಿದ್ದರು. ಬಳಿಕ ಆಕೆಯ ಪತಿಯೂ ಸಾವನ್ನಪ್ಪಿದ್ದು, ಮಕ್ಕಳು ಇರಲಿಲ್ಲ. ಜಯಮ್ಮನಿಗೆ ಇಬ್ಬರು ಅಕ್ಕಂದಿರು, ಒಬ್ಬ ತಮ್ಮ ಇದ್ದಾರೆ.

ಜಯಮ್ಮನ ಸಾವಿನ ಬಳಿಕ ಪಿತ್ರಾರ್ಜಿತ ಆಸ್ತಿಗಾಗಿ ತವರು ಮನೆಯಲ್ಲಿ ಗೊಂದಲ ಉಂಟಾಗಿದ್ದು, ಜಯಮ್ಮನ ಅಕ್ಕನ ಮಗ ಆಸ್ತಿಗಾಗಿ ಖಾಲಿ ಬಾಂಡ್ ಪೇಪರ್ ಮೇಲೆ ಮೃತ ಜಯಮ್ಮನ ಹೆಬ್ಬೆಟ್ಟಿನ ಗುರುತು ಹಾಕಿಸಿಕೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.‌

ಇದನ್ನೂ ಓದಿ: ಅಮಲಿನಲ್ಲಿ ಮಗನನ್ನು ಅಮಾನವೀಯವಾಗಿ ಥಳಿಸಿದ ಕುಡುಕ ತಂದೆ - Video Viral

Last Updated : Nov 28, 2021, 3:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.