ಮೈಸೂರು: ನಾನು ಹಿಂದೆ ಎಟಿಎನಲ್ಲಿ ಟ್ರೈನಿಂಗ್ ಗೆ ಬಂದಿದ್ದೆ. ಮೈಸೂರು ಹೊಸದೇನಲ್ಲ. ಮೈಸೂರ್ ಈಸ್ ದ ಲವ್ಲಿ ಸಿಟಿ ಎಂದು ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.
ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಚಾಮುಂಡಿ ತಾಯಿ ಹಾಗೂ ತ್ರಿಪುರ ಸುಂದರಿ ದೇವಿಯ ದರ್ಶನ ಪಡೆದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು.
![dc rohini sindoori talk about Mysore District](https://etvbharatimages.akamaized.net/etvbharat/prod-images/kn-mys-2-new-dc-charge-news-7208092_29092020121017_2909f_1601361617_516.jpg)
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2 ವಿಚಾರಗಳು ತುಂಬಾ ಗಂಭೀರವಾಗಿದ್ದು, ಮೊದಲನೆಯದು ಕೋವಿಡ್ ಸೋಂಕಿತರು ಹೆಚ್ಚಾಗಿರುವುದರಿಂದ ಅತಿ ಹೆಚ್ಚು ಟೆಸ್ಟಿಂಗ್ ಗಳನ್ನು ಮಾಡುವುದು. ಇದಕ್ಕಾಗಿ ಡಾಕ್ಟರ್ಗಳ ಹಾಗೂ ಅಧಿಕಾರಿಗಳ ಸಭೆ ನಡೆಸುತ್ತೇನೆ. ಎರಡನೆಯದು ದಸರಾ ನಡೆಸುವುದು. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಮಹಾಮಸ್ತಭಿಷೇಕ ನೆರವೇರಿಸಿದ ಅನುಭವ ಇದೆ ಎಂದರು.
ಕೋವಿಡ್ ಇರುವುದರಿಂದ ನಾಡಹಬ್ಬವನ್ನು ಎಚ್ಚರಿಕೆಯಿಂದ ನಡೆಸಬೇಕು, ಮೈಸೂರಿನ ಜನ ಅರ್ಥ ಮಾಡಿಕೊಂಡು ಸಹಕಾರ ನೀಡುತ್ತಾರೆ. ಎಲ್ಲರೂ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದ್ರು.