ETV Bharat / city

ಡಯಾಬಿಟಿಸ್ ಇರುವ ವ್ಯಕ್ತಿಗೆ ಜಂತು ಹುಳು ಮಾತ್ರೆ ನೀಡಿದ ಡಿಸಿ ರೋಹಿಣಿ ಸಿಂಧೂರಿ - ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಈ ರೋಗವನ್ನು ತಡೆಯಲು ಜಂತು ಹುಳು ಮಾತ್ರೆ ಸ್ವಲ್ಪ ಸಹಕಾರಿಯಾಗಲಿದೆ. ಆದ್ದರಿಂದ ಇಂದು ಎಲ್ಲ ಕಡೆ ಈ‌ ಮಾತ್ರೆಯನ್ನು ವಿತರಿಸಲಾಗುತ್ತಿದ್ದು‌, 75 ಸಾವಿರ ಡಯಾಬಿಟಿಸ್ ರೋಗಿಗಳು ಮೈಸೂರಿನಲ್ಲಿ‌ ಇದ್ದು, ಇವರಿಗೆ ಈ ಮಾತ್ರೆಯನ್ನು ನೀಡಲಾಗುತ್ತದೆ‌ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

dc-rohini-sindhuri-give-worm-pill-to-dayabitic-person
ಡಿಸಿ ರೋಹಿಣಿ ಸಿಂಧೂರಿ
author img

By

Published : May 28, 2021, 4:06 PM IST

ಮೈಸೂರು: ಜಂತು ಹುಳು ನಿವಾರಣಾ ದಿನಾಚರಣೆ ಹಿನ್ನೆಲೆ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಡಯಾಬಿಟಿಸ್ ಇರುವ ವ್ಯಕ್ತಿಗೆ ಜಂತು ಹುಳು ಮಾತ್ರೆ ನೀಡಿ ದಿನಾಚರಣೆ ಆಚರಿಸಿದರು.

ಡಿಸಿ ರೋಹಿಣಿ ಸಿಂಧೂರಿ

ಓದಿ: ಸಂತ್ರಸ್ತೆಯೇ ವೇಶ್ಯಾವಾಟಿಕೆಯ‌ ಕಿಂಗ್ ಪಿನ್ : ಭಾರತಕ್ಕೆ ಆರೋಪಿಗಳನ್ನು ಬರಮಾಡಿಕೊಂಡಿದ್ದೇ ಬಾಂಗ್ಲಾ ಯುವತಿ..

ಇಂದು ನಗರದ ಚಾಮುಂಡಿಪುರಂ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜನ ಮಾಡಿದ್ದ, ಜಂತುಹುಳು ನಿವಾರಣೆ ದಿನಾಚರಣೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇರವಾಗಿ ಮನೆಯೊಂದಕ್ಕೆ ತೆರಳಿ ಅಲ್ಲಿ ಡಯಾಬಿಟಿಸ್ ದಂಪತಿಗಳ ಆರೋಗ್ಯ ಹಾಗೂ ಲಸಿಕೆ ಹಾಕಿಸಿಕೊಂಡ ಬಗ್ಗೆ ಮಾಹಿತಿ ಪಡೆದರು. ಜೀರ್ಣ ಶಕ್ತಿ ಹೆಚ್ಚಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಜಂತು ಹುಳು ಮಾತ್ರೆ ಸಹಕಾರಿ ಆಗಲಿದೆ ಎಂದು ಸ್ವತಃ ಜಿಲ್ಲಾಧಿಕಾರಿ ಡಯಾಬಿಟಿಸ್ ವ್ಯಕ್ತಿಗೆ ಜಂತು ಹುಳು‌ ಮಾತ್ರೆ ನೀಡಿದರು.

ಕೋವಿಡ್ ನಂತರ ಬ್ಲಾಕ್‌ ಫಂಗಸ್ ಹೆಚ್ಚಾಗಿ ಆವರಿಸುತ್ತಿದ್ದು, ಈ ರೋಗಕ್ಕೆ ಡಯಾಬಿಟಿಸ್ ರೋಗಿಗಳು ಬೇಗ‌ ತುತ್ತಾಗುತ್ತಿದ್ದಾರೆ. ಈ ರೋಗವನ್ನು ತಡೆಯಲು ಜಂತು ಹುಳು ಮಾತ್ರೆ ಸ್ವಲ್ಪ ಸಹಕಾರಿಯಾಗಲಿದೆ. ಆದ್ದರಿಂದ ಇಂದು ಎಲ್ಲ ಕಡೆ ಈ‌ ಮಾತ್ರೆಯನ್ನು ವಿತರಿಸಲಾಗುತ್ತಿದ್ದು‌, 75 ಸಾವಿರ ಡಯಾಬಿಟಿಸ್ ರೋಗಿಗಳು ಮೈಸೂರಿನಲ್ಲಿ‌ ಇದ್ದು, ಇವರಿಗೆ ಈ ಮಾತ್ರೆಯನ್ನು ನೀಡಲಾಗುತ್ತದೆ‌ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಈಗ ಬ್ಲಾಕ್ ಫಂಗಸ್ ರೋಗಿಗಳು 2 ರಿಂದ 3 ದಿನಗಳಲ್ಲಿ ಗುಣಮುಖರಾಗುತ್ತಿದ್ದು, ಇದಕ್ಕೆ ಡಯಾಬಿಟಿಸ್ ರೋಗಿಗಳಿಗೆ ಜಂತು ಹುಳು ಮಾತ್ರೆಯನ್ನು‌ ನೀಡಲಾಗುತ್ತಿದ್ದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.