ಮೈಸೂರು: ಆಟೋ ಚಾಲಕನ ಮಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.87 ರಷ್ಟು ಅಂಕಗಳಿಸಿ ಉತ್ತೀರ್ಣರಾಗಿದ್ದು ಆಟೋ ಚಾಲಕರು ಆಕೆಯನ್ನು ಸನ್ಮಾನಿಸಿ, ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯಹಸ್ತ ಚಾಚಲು ಮುಂದಾಗಿದ್ದಾರೆ.
ಟಿ. ನರಸೀಪುರ ತಾಲ್ಲೂಕಿನ ಎಡದೊರೆ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯ ವಿದ್ಯಾರ್ಥಿನಿ ಛಾಯಾದೇವಿ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ-119, ಇಂಗ್ಲಿಷ್-75, ಹಿಂದಿ-99, ಗಣಿತ-75, ವಿಜ್ಞಾನ-81, ಸಮಾಜ ವಿಜ್ಞಾನ 95 ಸೇರಿದಂತೆ 625ಕ್ಕೆ 545 ಅಂಕಗಳಿಸುವ ಮೂಲಕ ಶೇ.87 ರ ಸಾಧನೆ ಮಾಡಿದ್ದಾಳೆ.
ತಾಲ್ಲೂಕಿನ ಗುಂಜಾ ನರಸಿಂಹಸ್ವಾಮಿ ಆಟೊ ಚಾಲಕರ ಸಂಘದ ಸದಸ್ಯ ಹ. ನಾಗಣ್ಣ ಅವರ ಮಗಳು ಛಾಯಾದೇವಿಗೆ ಸಂಘದ ಅಧ್ಯಕ್ಷರಾದ ಮಣಿಕಂಠ ರಾಜುಗೌಡರು ನಗದು ಬಹುಮಾನ ಮತ್ತು ಅಂಬೇಡ್ಕರ್ ಭಾವಚಿತ್ರ ನೀಡಿ ಸನ್ಮಾನಿಸಲಾಯಿತು.