ಮೈಸೂರು : ನಾದಬ್ರಹ್ಮ ಹಂಸಲೇಖ ಹೇಳಿಕೆಗೆ ಬೆಂಬಲ ನೀಡಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಿ.ನರಸೀಪುರದ ತಾಲೂಕು ಕಚೇರಿ ಮುಂದೆ ಮಾಂಸಾಹಾರ ಊಟ ತಯಾರಿಸಿ ಅಲ್ಲೇ ಭೋಜನ ಸೇವನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಸಂಸದ ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಹಂಸಲೇಖ ನೀಡಿರುವ ಹೇಳಿಕೆ ಸರಿಯಿದೆ ಎಂದರು. ಅಸ್ಪೃಶ್ಯತೆ ಆಚರಣೆ ಇನ್ನು ಜೀವಂತವಾಗಿದೆ.
ಮಾಂಸಹಾರಿಗಳನ್ನು ರಾಕ್ಷಸರಂತೆ ಬಿಂಬಿಸಲು ಮನುವಾದಿಗಳು ಮುಂದಾಗಿದ್ದಾರೆ. ಆಹಾರ ಪದ್ಧತಿ ಅನ್ನುವುದು ಎಲ್ಲರ ಹಕ್ಕು ಎಂಬುವುದನ್ನು ಮರೆಸುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕನ್, ಲಿವರ್ ಫ್ರೈ ಸೇರಿದಂತೆ ಇತರೆ ಮಾಂಸಾಹಾರವನ್ನು ತಯಾರಿಸಿ ಸೇವಿಸಿದರು. ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಅವರು ಈ ರೀತಿಯ ಹೇಳಿಕೆ ನೀಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಾಪ್ ಸಿಂಹ ಅವರಿಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದರು.