ETV Bharat / city

ಪಿರಿಯಾಪಟ್ಟಣದಲ್ಲಿ ಆಕ್ಸಿಜನ್ ಸಿಗದೇ ಕೋವಿಡ್​ ಸೋಂಕಿತ ಮಹಿಳೆ ಸಾವು - ಆಕ್ಸಿಜನ್ ಸಿಗದೇ ಮಹಿಳೆ ಸಾವು

ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿದ್ದ ಕಾರಣ ಮತ್ತೆ ಭಾನುವಾರ ಪಿರಿಯಾಪಟ್ಟಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದು, ಇಂದು ಮೃತಪಟ್ಟಿದ್ದಾರೆ..

Mysore
ಪಿರಿಯಾಪಟ್ಟಣದಲ್ಲಿ ಆಕ್ಸಿಜನ್ ಸಿಗದೇ ಕೋವಿಡ್​ ಸೋಂಕಿತ ಮಹಿಳೆ ಸಾವು
author img

By

Published : Apr 26, 2021, 2:15 PM IST

ಮೈಸೂರು : ಆಮ್ಲಜನಕ ಸಿಗದೇ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಕೋವಿಡ್​ ಸೋಂಕಿತ ಮಹಿಳೆ ಮೃತಪಟ್ಟಿದ್ದಾರೆ.

ಪಿರಿಯಾಪಟ್ಟಣದಲ್ಲಿ ಆಕ್ಸಿಜನ್ ಸಿಗದೇ ಕೋವಿಡ್​ ಸೋಂಕಿತ ಮಹಿಳೆ ಸಾವು

ಕೋವಿಡ್​ ಸೋಂಕಿತ ಮಹಿಳೆ ಏಪ್ರಿಲ್​​ 20ರಂದು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಆಕೆಗೆ ಅತಿಸಾರ ನಿಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು.

ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿದ್ದ ಕಾರಣ ಮತ್ತೆ ಭಾನುವಾರ ಪಿರಿಯಾಪಟ್ಟಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದು, ಇಂದು ಮೃತಪಟ್ಟಿದ್ದಾರೆ.

ಮಹಿಳೆ ಸಾವನ್ನಪ್ಪಿದ ಹಿನ್ನೆಲೆ ಆಸ್ಪತ್ರೆಯ ಸಿಬ್ಬಂದಿ, ಮೃತರ ಕುಟುಂಬದವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮೊದಲು ಆಸ್ಪತ್ರೆಯವರೆ ಶವ ಸಂಸ್ಕಾರ ನಡೆಸುವುದಾಗಿ ತಿಳಿಸಿದ್ದರು. ಇದೀಗ ಕುಟುಂಬದವರೇ ಶವ ಕೊಂಡೊಯ್ಯುವಂತೆ ಸೂಚನೆ ನೀಡಿದ್ದಾರೆ.

ಆದರೆ, ಕುಟುಂಬದವರು ಆಸ್ಪತ್ರೆ ಸಿಬ್ಬಂದಿಯೇ ಶವಸಂಸ್ಕಾರ ನಡೆಸಿಬೇಕು ಎಂದು ಪಟ್ಟು ಹಿಡಿದು ತಾಲೂಕು ಆರೋಗ್ಯಾಧಿಕಾರಿ ಹಾಗೂ ತಹಶೀಲ್ದಾರ್ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ಓದಿ: ಹುಣಸೂರಿನಲ್ಲೂ ಆಕ್ಸಿಜನ್ ಸಿಗದೇ ಇಬ್ಬರು ಕೋವಿಡ್​ ರೋಗಿಗಳು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.