ETV Bharat / city

ಮೈಸೂರಿನಲ್ಲಿ ಪ್ರತಿದಿನ ಶತಕದ ಗಡಿ ದಾಟುತ್ತಿರುವ ಸೋಂಕಿತರ ಸಂಖ್ಯೆ.. ಆತಂಕದಲ್ಲಿ ಜನತೆ

ಮೈಸೂರು ಜಿಲ್ಲೆಯಲ್ಲಿ 2ನೇ ಹಂತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ 100ರ ಗಡಿ ದಾಟುತ್ತಿದ್ದು, ದಿನಕ್ಕೆ 2ರಿಂದ 3 ಜನ ಸಾವನ್ನಪ್ಪುತ್ತಿದ್ದಾರೆ.

Corona not available for control in Mysore.
ಮೈಸೂರಿನಲ್ಲಿ ಪ್ರತಿದಿನ ಶತಕದ ಗಡಿ ದಾಟುತ್ತಿರುವ ಸೋಂಕಿತರ ಸಂಖ್ಯೆ..ಆತಂಕದಲ್ಲಿ ಜನತೆ
author img

By

Published : Jul 15, 2020, 10:26 PM IST

ಮೈಸೂರು: 2ನೇ ಹಂತದಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ 100ರ ಗಡಿ ದಾಟುತ್ತಿದ್ದು, ದಿನಕ್ಕೆ 2 ರಿಂದ 3 ಜನ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ.

ಜಿಲ್ಲಾಡಳಿತ ಎಷ್ಟೇ ಬಿಗಿಯಾದ ಕ್ರಮ ಕೈಗೊಂಡರೂ ಕೊರೊನಾ ಕಂಟ್ರೋಲ್​ಗೆ ಬರುತ್ತಿಲ್ಲ. ಪ್ರತಿದಿನ 400 ರಿಂದ 500 ಜನರಿಗೆ ಕೊರೊನಾ ಟೆಸ್ಟ್ ಮಾಡಿಸುತ್ತಿದ್ದು, ಫಲಿತಾಂಶ ತಡವಾಗುತ್ತಿದೆ. ಇದು ಸಹ ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

ಸೋಂಕು ಹೆಚ್ಚಾಗಲು ಕಾರಣವೇನು?: ಜಿಲ್ಲೆಗೆ ಮಹಾರಾಷ್ಟ್ರ , ತಮಿಳುನಾಡು, ಕೇರಳ, ಉತ್ತರ ಭಾರತ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದು, ಇದು ಎರಡನೇ ಹಂತದಲ್ಲಿ ಸೋಂಕು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. 39 ಪ್ರದೇಶಗಳನ್ನು ಕಂಟೇನ್ಮೆಂಟ್​ ಝೋನ್​ಗಳೆಂದು ಗುರುತಿಸಲಾಗಿದ್ದು, ಆದರೂ ಸಹ ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕೆಲವರು ಪರೀಕ್ಷೆ ಮಾಡಿಸಿದರೆ ಕ್ವಾರಂಟೈನ್​ನಲ್ಲಿ ಇರಬೇಕೆಂದು ಹೆದರಿ ಪರೀಕ್ಷೆಗೆ ಒಳಪಡುತ್ತಿಲ್ಲ. ಇನ್ನು, ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ. ಇದರಿಂದ ಜಿಲ್ಲಾಡಳಿತ ಈಗಾಗಲೇ ಕೆಎಸ್​ಒಯು ಅತಿಥಿ ಗೃಹವನ್ನು ಕೋವಿಡ್​ ಆಸ್ಪತ್ರೆಯನ್ನಾಗಿ ಮಾಡಿದೆ. ಚಾಮುಂಡಿ ವಿಹಾರ ಕ್ರೀಡಾಂಗಣವನ್ನು ಕೂಡ ಕೋವಿಡ್ ಆಸ್ಪತ್ರೆಯಾಗಿ ಮಾಡಲು ಸಿದ್ದತೆ ಮಾಡಿಕೊಂಡಿದ್ದು, ಮೈಸೂರಿನಲ್ಲಿ ಒಟ್ಟು 3,500 ಬೆಡ್​ಗಳನ್ನು ಸಿದ್ದಪಡಿಸಲಾಗಿದೆ. ಅತಿ ಹೆಚ್ಚು ಪ್ರಕರಣಗಳಿರುವ ಎನ್.ಆರ್. ಕ್ಷೇತ್ರದ ಕೆಲವು ಏರಿಯಾಗಳನ್ನು ಧಾರಾವಿ ಮಾದರಿಯಲ್ಲಿ ಲಾಕ್​ಡೌನ್ ಮಾಡಿ, ಎಲ್ಲರಿಗೂ ಕೋವಿಡ್​ ಪರೀಕ್ಷೆ ಮಾಡಲು ಸಿದ್ದತೆ ನಡೆಸಿದೆ.

ಲಾಕ್​ಡೌನ್​ಗೆ ಮನವಿ: ಜಿಲ್ಲೆಯಲ್ಲಿ ಪ್ರತಿನಿತ್ಯ ಸೋಂಕಿತರ ಸಂಖ್ಯೆ ಏರುತ್ತಿದ್ದು, ಗ್ರಾಮಾಂತರ ಪ್ರದೇಶಕ್ಕೂ ಹರಡುತ್ತಿದೆ. ಜೊತೆಗೆ ಬೆಂಗಳೂರು ಲಾಕ್​ಡೌನ್ ಆಗಿದ್ದರಿಂದ ಅಲ್ಲಿದ್ದ ಜನರು ತಮ್ಮ-ತಮ್ಮ ಗ್ರಾಮಗಳಿಗೆ ವಾಪಸ್ ಆಗುತ್ತಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಒಂದು ವಾರಗಳ ಕಾಲ ಮೈಸೂರು ಲಾಕ್​ಡೌನ್ ಮಾಡಿ ಎಂದು ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಖ್ಯವಾಗಿ ತಿ. ನರಸೀಪುರ, ನಂಜನಗೂಡು, ಹೆಚ್.ಡಿ. ಕೋಟೆ, ಹುಣಸೂರು, ಕೆ.ಆರ್. ನಗರದ ಕೆಲವು ಪ್ರದೇಶಗಳಲ್ಲಿ ಸೋಂಕಿತರ ಪ್ರಮಾಣ ಪ್ರತಿನಿತ್ಯ ಹೆಚ್ಚಾಗುತ್ತಿದ್ದು, ಇದರಿಂದ ಪ್ರತಿ ತಾಲೂಕಿನಲ್ಲೂ ಕೋವಿಡ್ ಆಸ್ಪತ್ರೆ ತೆರೆಯಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿನ ಸೋಂಕಿನ ಅಂಕಿಅಂಶಗಳು: ಜಿಲ್ಲೆಯಲ್ಲಿ 1,091 ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 498 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 552 ಜನರು ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ 41 ಮಂದಿ ಸಾವನ್ನಪ್ಪಿದಾರೆ. ಇಲ್ಲಿಯವರೆಗೆ 29,291 ಮಂದಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು , ಅದರಲ್ಲಿ 28,171 ಜನರ ವರದಿ ನೆಗೆಟಿವ್​ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.