ETV Bharat / city

ಬಿಜೆಪಿ ಸರ್ಕಾರದ ವಿರುದ್ಧ ದಾಖಲೆಗಳಿಲ್ಲದೆ ಕಾಂಗ್ರೆಸ್ ಆರೋಪ ಮಾಡುತ್ತಿದೆ : ಬಿ ವೈ ವಿಜಯೇಂದ್ರ - BJP state vice president B Y Vijayendra

ಕಾಂಗ್ರೆಸ್ ಅಧಿಕಾರ ಹಿಡಿಯಲು ದಾಖಲೆಗಳಿಲ್ಲದೆ ಸುಳ್ಳು ಆರೋಪ ಮಾಡುತ್ತಿರುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಆದರೆ, ಅಧಿಕಾರ ನಾವೇ ಪಡೆಯುವುದಾಗಿ ವಿಜಯೇಂದ್ರ ಭರವಸೆ ವ್ಯಕ್ತಪಡಿಸಿದ್ದಾರೆ..

congress-doing-fake-allegations-against-bjp-leaders
ದಾಖಲೆಗಳಿಲ್ಲದೆ ಕಾಂಗ್ರೆಸ್ ಆರೋಪ ಮಾಡುತ್ತಿದೆ : ಬಿ ವೈ ವಿಜಯೇಂದ್ರ
author img

By

Published : May 4, 2022, 1:53 PM IST

ಮೈಸೂರು : ಕಾಂಗ್ರೆಸ್ ಅಧಿಕಾರ ಹಿಡಿಯುವ ಆತುರದಲ್ಲಿದೆ. ಹೀಗಾಗಿ, ದಾಖಲೆಗಳಿಲ್ಲದೆ ಕಾಂಗ್ರೆಸ್‌ ಆರೋಪ ಮಾಡುತ್ತಿರುವುದಾಗಿ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಬಿ ವೈ ವಿಜಯೇಂದ್ರ ಮಾಧ್ಯಮಗಳ ಜೊತೆ ಮಾತನಾಡಿ, ಯಾವುದೇ ಪುರಾವೆ ಇಲ್ಲದೆ ಕಾಂಗ್ರೆಸ್​ನವರು ಬಿಜೆಪಿ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ.

ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪಿಎಸ್ಐ ಹಗರಣವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸರ್ಕಾರ ಮುಂದಾಗಿದೆ. ತಮ್ಮ ಹುಳುಕನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಬಿಜೆಪಿ ಮೇಲೆ ಆರೋಪ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಹಳೆ ಮೈಸೂರು ಮೇಲೆ ಬಿಜೆಪಿ ಕಣ್ಣು : ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಹಿರಿಯ ನಾಯಕರ ಒಲವು ಹೆಚ್ಚಾಗಿದೆ. ಈ ಬಾರಿ ವಿಶೇಷ ಕಾಳಜಿವಹಿಸಿ ಚುನಾವಣೆ ನಡೆಸಲಿದ್ದೇವೆ. ನನಗೂ ಮೈಸೂರು ಭಾಗದ ಮೇಲೆ ಹೆಚ್ಚಿನ ಒಲವಿದೆ. ಹಲವಾರು ಕಾರಣಗಳಿಂದ ಈ ಭಾಗದಲ್ಲಿ ತೊಡಗಿಸಿಕೊಳ್ಳಲು ಆಗಿರಲಿಲ್ಲ.

ಆದರೆ, ಈ ಬಾರಿ ಮೈಸೂರು ಭಾಗದಲ್ಲಿ ಹೆಚ್ಚು ಕೆಲಸ ಮಾಡುತ್ತೇನೆ. ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯೋದು ನಮ್ಮ ಗುರಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿರುವಾಗ 120 ಸ್ಥಾನಗಳನ್ನು ಗೆದ್ದು ನಾವೇ ಅಧಿಕಾರಕ್ಕೆ ಬರ್ತೀವಿ ಅಂತಾರೆ, ಅದರಲ್ಲಿ ತಪ್ಪೇನೂ ಇಲ್ಲ. ಕಡೆಯದಾಗಿ ಜನರು ಉತ್ತಮರಿಗೆ ಅಧಿಕಾರವನ್ನು ನೀಡುತ್ತಾರೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಓದಿ : ಚಿನ್ನ-ಬೆಳ್ಳಿ ದರ ಇಳಿಕೆ: ಆಭರಣ ಪ್ರಿಯರಿಗೆ ಕೊಂಚ ಖುಷಿ ಸುದ್ದಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.