ETV Bharat / city

ಮೂರು ಡಿಸಿಎಂ ಸ್ಥಾನ ಯಾಕೆ? ಸಿಎಂ ರಿಂದಲೂ ಸಿಗದ ಉತ್ತರ - ಮೂರು ಉಪ ಮುಖ್ಯಮಂತ್ರಿಗಳು

ರಾಜ್ಯಕ್ಕೆ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸಿರುವ ವಿಚಾರ ಪ್ರತಿಪಕ್ಷಗಳು ಸೇರಿದಂತೆ ಎಲ್ಲರ ಟೀಕೆಗೆ ಗುರಿಯಾಗಿದೆ. ಈಗ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಈ ಬಗ್ಗೆ ಕೇಳಿದ್ರೆ ಅವರಿಂದಲೂ ಉತ್ತರ ಸಿಗುತ್ತಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ
author img

By

Published : Aug 29, 2019, 2:06 PM IST

ಮೈಸೂರು: ರಾಜ್ಯಕ್ಕೆ ಮೂವರು ಉಪ ಮುಖ್ಯಮಂತ್ರಿಗಳ ಅವಶ್ಯಕತೆ ಇತ್ತೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಎಂ ಯಡಿಯೂರಪ್ಪ ಬಳಿಯೂ ಉತ್ತರ ಸಿಗುತ್ತಿಲ್ಲ.

ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಸಿಎಂ ಮಾತು

ಇಂದು ಚಾಮುಂಡಿ ಬೆಟ್ಟಕ್ಕೆ ಹೋಗಲು ಲಲಿತ್ ಮಹಲ್ ಹೆಲಿಪ್ಯಾಡ್​ಗೆ ಆಗಮಿಸಿದ್ದ ಅವರು, ಮಾಧ್ಯಮದವರ ಬಳಿ ಮಾತನಾಡಿದರು. ರಾಜ್ಯದಲ್ಲಿ ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡವರಿಗೆ ಶೀಘ್ರವೇ ಪರಿಹಾರ ನೀಡುವಂತೆ ಸೂಚಿಸಿದ್ದೇನೆ. 3-4 ದಿನಗಳಲ್ಲಿ ಕೇಂದ್ರದಿಂದ ನೆರವು ಸಿಗುವ ಸಾಧ್ಯತೆಯಿದೆ ಎಂದರು. ಸೆಪ್ಟಂಬರ್​ 7ರಂದು ರಾಜ್ಯಕ್ಕೆ ಪ್ರಧಾನಿಯವರು ಆಗಮಿಸಲಿದ್ದು, ಅವರಿಗೆ ರಾಜ್ಯದಲ್ಲಿ ಉಂಟಾದ ಪ್ರವಾಹ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ವೇಳೆ ರಾಜ್ಯಕ್ಕೆ ಮೂವರು ಡಿಸಿಎಂಗಳ ಅವಶ್ಯಕತೆ ಇತ್ತಾ ಅಂತಾ ಮಾಧ್ಯಮದವರು ಪ್ರಶ್ನಿಸಿದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ, ಸಿಎಂ ಬಿಎಸ್​ವೈ ಹೊರಟು ಹೋದ್ರು.

Intro:ಮೈಸೂರು: ಮೂರು ಉಪ ಮುಖ್ಯಮಂತ್ರಿ ಸ್ಥಾನ ಬೇಕಿತ್ತೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದೆ ಸಿಎಂ ಹೊರಟು ಹೋದ ಘಟನೆ ನಡೆಯಿತು.

Body:ಇಂದು ಸಿಎಂ ಯಡಿಯೂರಪ್ಪ ಚಾಮುಂಡಿ ಬೆಟ್ಟಕ್ಕೆ ಹೋಗಲು ಲಲಿತ್ ಮಹಲ್ ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಉಂಟಾದ ಪ್ರವಾಹದ ಹಿನ್ನಲೆಯಲ್ಲಿ ಮನೆ ಕಳೆದುಕೊಂಡವರಿಗೆ ಶೀಘ್ರವೇ ಸೂಚಿಸಿದ್ದೇನೆ. ಇನ್ನೂ ಮೂರು ೪ ದಿನಗಳಲ್ಲಿ ಕೇಂದ್ರದಿಂದ ಒಳ್ಳೆಯ ನೆರವು ಸಿಗುವ ಸಾಧ್ಯತೆ ಇದೆ ಎಂದ ಅವರು
ಮುಂದಿನ ತಿಂಗಳು ೭ ರಂದು ರಾಜ್ಯಕ್ಕೆ ಪ್ರಧಾನಿಯವರು ಆಗಮಿಸಲಿದ್ದು ಅವರಿಗೆ ರಾಜ್ಯದಲ್ಲಿ ಉಂಟಾದ ಪ್ರವಾಹ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಮೂರು ಡಿಸಿಎಂ ಗಳ ಅವಶ್ಯಕತೆ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದೆ ಹೊರಟು ಹೋದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.