ETV Bharat / city

ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಕ್ಲೀನ್​ ಸಿಟಿ ಫಲಿತಾಂಶ ಪ್ರಕಟ: ಮೈಸೂರಿಗೆ ಮತ್ತೆ ಸ್ವಚ್ಛ ನಗರಿ ಪಟ್ಟ - ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2020

ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಸ್ವಚ್ಛ ನಗರಿ ಫಲಿತಾಂಶ ಪ್ರಕಟವಾಗಿದ್ದು, 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರದ ವಿಭಾಗದಲ್ಲಿ ಸಾಂಸ್ಕೃತಿಕ ನಗರಿ‌ ಮೊದಲ‌ ಸ್ಥಾನ ಪಡೆದಿದೆ.

clean-survey-campaign-for-clean-city-results-mysore
ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಸ್ವಚ್ಛ ನಗರಿ ಫಲಿತಾಂಶ ಪ್ರಕಟ: ಮೈಸೂರಿಗೆ ಸ್ವಚ್ಛ ನಗರಿ ಪಟ್ಟ
author img

By

Published : Aug 20, 2020, 3:18 PM IST

ಮೈಸೂರು: ಸಾಂಸ್ಕೃತಿಕ ನಗರಿ 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಮೈಸೂರು ಮತ್ತೆ ಸ್ವಚ್ಛ ನಗರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಮೈಸೂರಿಗೆ ಮತ್ತೆ ಒಲಿಯಿತು ಸ್ವಚ್ಛ ನಗರಿ ಪ್ರಶಸ್ತಿ

ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಸ್ವಚ್ಛ ನಗರಿ ಫಲಿತಾಂಶ ಪ್ರಕಟವಾಗಿದ್ದು, 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರದ ವಿಭಾಗದಲ್ಲಿ ಸಾಂಸ್ಕೃತಿಕ ನಗರಿ‌ ಮೊದಲ‌ ಸ್ಥಾನ ಪಡೆದಿದೆ. ಇಂದು ದೆಹಲಿಯ ಕಾರ್ಯಕ್ರಮದಲ್ಲಿ ಸ್ವಚ್ಛ ನಗರಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸಾಂಸ್ಕೃತಿಕ ನಗರಿ ಮೊದಲ ಸ್ಥಾನ ಪಡೆದು, ಸ್ವಚ್ಛ ನಗರಿ ಎಂದು ಖ್ಯಾತಿ ಪಡೆದಿದೆ.

ಈ ನಡುವೆ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಇಂದೋರ್ ಮೊದಲ ಸ್ಥಾನ ಗಳಿಸಿದ್ದರೆ, ಗುಜರಾತ್ ನ ಸೂರತ್ 2ನೇ ಸ್ಥಾನ ಮತ್ತು ಮಹಾರಾಷ್ಟ್ರ ನವೀ ಮುಂಬೈ 3ನೇ ಸ್ಥಾನ ಪಡೆದಿದೆ.

ಅರಮನೆ ಮುಂಭಾಗದಲ್ಲಿ ಸಂಭ್ರಮ:

ಮೈಸೂರಿನ ಪೌರ ಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಪ್ರಧಾನಿಯೊಂದಿಗೆ ಏರ್ಪಡಿಸಲಾಗಿತ್ತು. ಕಾರಣಾಂತರದಿಂದ ಈ ಕಾರ್ಯಕ್ರಮ ರದ್ದಾಗಿತ್ತು, ಆದ್ರೆ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಖಾತೆಯ ರಾಜ್ಯ ಸಚಿವ ಹರ್​ದೀಪ್ ಸಿಂಗ್ ಪುರಿ ಅವರು ಮೈಸೂರಿನ ಇಬ್ಬರು ಪೌರ ಕಾರ್ಮಿಕರಾದ ಮಂಜುಳ ಮತ್ತು ನಂಜುಂಡಸ್ವಾಮಿ ಅವರೊಂದಿಗೆ ಸಂವಾದ ನಡೆಸಿದರು.

3 ರಿಂದ 10 ಲಕ್ಷ ಜನಸಂಖ್ಯೆ ವಿಭಾಗದಲ್ಲಿ ಮೈಸೂರು ಸ್ವಚ್ಛ ನಗರಿ ಮೊದಲ ಸ್ಥಾನ ಪಡೆದರೆ, ಸಮಗ್ರ ವಿಭಾಗದಲ್ಲಿ 4ನೇ ಸ್ಥಾನ ಮುಡಿಗೇರಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.