ಮೈಸೂರು : ಚಿರತೆ ಹಾವಳಿಯ ಭಯದ ವಾತಾವರಣದಲ್ಲಿರುವ ಶಿಂಡೇನಹಳ್ಳಿ ಗ್ರಾಮಸ್ಥರಿಗೆ ಇಂದು ಮತ್ತೊಂದು ಚಿರತೆ ಸೆರೆಯಾಗಿದ್ದರಿಂದಾಗಿ ಕೊಂಚ ಆತಂಕ ದೂರವಾಗಿದೆ.
ಹೆಚ್ ಡಿಕೋಟೆ ತಾಲೂಕಿನ ಶಿಂಡೇನಹಳ್ಳಿ ಗ್ರಾಮದಲ್ಲಿ ಪುಟ್ಟೇಗೌಡ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸುಮಾರು ನಾಲ್ಕು ವರ್ಷ ವಯಸ್ಸಿನ ಗಂಡು ಚಿರತೆ ಸೆರೆಯಾಗಿದೆ. 20 ದಿನಗಳ ಹಿಂದಷ್ಟೇ ಒಂದು ಚಿರತೆ ಸೆರೆಯಾಗಿತ್ತು. ಇದೀಗ ಮತ್ತೊಂದು ಚಿರತೆ ಸೆರೆಯಾಗಿದೆ.
ಇದನ್ನೂ ಓದಿ: ಚಿರತೆ ಕಣ್ಣಾಮುಚ್ಚಾಲೆ:ಅರಣ್ಯ ಇಲಾಖೆ ಚಿಂತೆಗೆ ದೂಡಿದ ಚಿರತೆ
ಈ ಭಾಗದಲ್ಲಿ ಮೂರು ಚಿರತೆಗಳಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದರು. ಎರಡು ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಉಳಿದ ಮತ್ತೊಂದು ಚಿರತೆ ಸೆರೆ ಹಿಡಿಯುಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.