ETV Bharat / city

ಮೈಸೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಪ್ರತ್ಯೇಕ ಪ್ರಕರಣಗಳಲ್ಲಿ 9 ಜನರ ಬಂಧನ - ccb police

ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ‌ ಪ್ರಕರಣಗಳಲ್ಲಿ ಮೂವರು ಸರಗಳ್ಳರು, ಇಬ್ಬರು ದ್ವಿಚಕ್ರ ವಾಹನ ಕಳ್ಳರು ಹಾಗೂ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಮತ್ತು ಮಟ್ಕಾ ದಂಧೆ ನಡೆಸುತ್ತಿದ್ದ ಮೂವರನ್ನು ಬಂಧಿಸಿ‌ದ್ದಾರೆ.

ccb police arerested 9 peoples
ಸಿಸಿಬಿ ಪೊಲೀಸರಿಂದ 9 ಜನರ ಬಂಧನ
author img

By

Published : Nov 4, 2021, 5:47 PM IST

ಮೈಸೂರು: ನಗರದ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ‌ ಪ್ರಕರಣಗಳಲ್ಲಿ ಮೂವರು ಸರಗಳ್ಳರು, ಇಬ್ಬರು ದ್ವಿಚಕ್ರ ವಾಹನ ಕಳ್ಳರು ಹಾಗೂ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಮತ್ತು ಮಟ್ಕಾ ದಂಧೆ ನಡೆಸುತ್ತಿದ್ದ ಮೂವರನ್ನು ಬಂಧಿಸಿ‌ ನಗದನ್ನು ವಶಪಡಿಸಿಕೊಂಡಿದ್ದಾರೆ.

ಮೂವರು ಸರಗಳ್ಳರ ಬಂಧನ:
ಮೈಸೂರಿನಲ್ಲಿ ಸರಗಳ್ಳತನ‌ ಹೆಚ್ಚಾಗಿದ್ದು, ಪ್ರಕರಣ ಭೇದಿಸಲು ಪೊಲೀಸ್ ಆಯುಕ್ತರಿಂದ ರಚಿಸಲಾಗಿದ್ದ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಮೈಸೂರಿನ ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯಲ್ಲಿರುವ ಇಂಗುಲಾಂಬಿಕ ವೈನ್ಸ್ ಸೆಂಟರ್ ಮುಂಭಾಗ ಮೂವರು ಸರಗಳ್ಳರನ್ನು ವಶಕ್ಕೆ ಪಡೆದಿದೆ. ಬಂಧಿತರದಿಂದ 100 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಇಬ್ಬರು ದ್ವಿಚಕ್ರ ವಾಹನ ಕಳ್ಳರ ಸೆರೆ: ನಗರದ ಮಹದೇವಪುರ ಮುಖ್ಯರಸ್ತೆಯಲ್ಲಿರುವ ಫ್ಯಾಮಿಲಿ ಶಾಪ್ ಬಟ್ಟೆ ಅಂಗಡಿ ಮುಂಭಾಗ ನಂಬರ್​ ಪ್ಲೇಟ್​ ಇಲ್ಲದೇ ವಾಹನ ಚಲಾಯಿಸುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮೈಸೂರು ನಗರ, ಜಿಲ್ಲೆ ಹಾಗೂ ಬೆಂಗಳೂರಿನಲ್ಲಿ ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಇವರ ವಿರುದ್ಧ ಮೈಸೂರು ನಗರ ವಿದ್ಯಾರಣ್ಯಾಪುರಂ, ನರಸಿಂಹರಾಜ, ಉದಯಗಿರಿ, ಮೇಟಗಳ್ಳಿ, ಹೆಬ್ಬಾಳು ಪೊಲೀಸ್ ಠಾಣೆಗಳಲ್ಲಿ ತಲಾ 1, ನಂಜನಗೂಡಿನಲ್ಲಿ2, ಹುಲ್ಲಹಳ್ಳಿ ಠಾಣೆಯಲ್ಲಿ1, ಬೆಂಗಳೂರಿನ ಅತ್ತಿಬೆಲೆ, ದೇವರಜೀವನಹಳ್ಳಿ ಠಾಣೆಗಳಲ್ಲಿ ತಲಾ 1 ದ್ವಿಚಕ್ರ ವಾಹನ ‌ಕಳ್ಳತನ ಪ್ರಕರಣ ಪತ್ತೆಯಾಗಿವೆ.

ಕ್ರಿಕೆಟ್ ಬೆಟ್ಟಿಂಗ್, ವ್ಯಕ್ತಿಯ ಬಂಧನ: ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಎದುರಿರುವ ಮಹಾರಾಜ ಕಾಂಪ್ಲೆಕ್ಸ್​ನಲ್ಲಿರುವ ಪ್ಯಾರಾಮೌಂಟ್ ಸ್ಪೋರ್ಟ್ಸ್ ಕ್ಲಬ್ ಮೇಲೆ‌‌ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು, ಕ್ರಿಕೆಟ್​ ಬೆಟ್ಟಿಂಗ್​ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬೆಟ್ಟಿಂಗ್​ಗೆ ಬಳಸುತ್ತಿದ್ದ ಮೊಬೈಲ್ ಹಾಗೂ ಪಣಕ್ಕಿಟ್ಟಿದ್ದ 6075 ರುಪಾಯಿ ನಗದನ್ನು ನಜರಾಬಾದ್ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಟ್ಕಾ ದಂಧೆ ನಡೆಸುತ್ತಿದ್ದವರ ಬಂಧನ:
ಇಎಸ್ಎಸ್ಆರ್ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಮೈದಾನದಲ್ಲಿ ದಾಳಿ ಮಾಡಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ ಮಟ್ಕಾ‌ ಜೂಜಾಟಕ್ಕೆ ಬಳಸುತ್ತಿದ್ದ 3 ಮೊಬೈಲ್, 35 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.