ETV Bharat / city

ದಚ್ಚು ಕರೆಗೆ ಸ್ಪಂದಿಸಿದ ಪ್ರಾಣಿಪ್ರಿಯರು.. ಅರಣ್ಯ ಇಲಾಖೆಗೆ ಹರಿದುಬಂತು ಲಕ್ಷ ಲಕ್ಷ ಹಣ - dboss campaign

ನಟ ದರ್ಶನ್ ಅವರು ಕರೆಕೊಟ್ಟ ಬಳಿಕ ಅರಣ್ಯ ಇಲಾಖೆಗೆ 40 ಲಕ್ಷ ರೂ. ಸಂಗ್ರಹವಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಈ ಸಂಬಂಧ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್
ಚಾಲೆಂಜಿಂಗ್ ಸ್ಟಾರ್
author img

By

Published : Jun 7, 2021, 8:25 PM IST

ಮೈಸೂರು: ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಪೋಷಿಸುತ್ತಿರುವ ಹಾಗೂ ಪ್ರಾಣಿಗಳನ್ನು ದತ್ತು ಪಡಯುವಂತೆ ಕರೆ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಕಟಣೆ
ಪ್ರಕಟಣೆ
ಈ ಬಗ್ಗೆ ಹೇಳಿಕೆ ನೀಡಿರುವ ಸಚಿವರು, ಚಾಲೆಂಜಿಂಗ್ ಸ್ಟಾರ್ ಕರೆಕೊಟ್ಟ ಹಿನ್ನೆಲೆ 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಕೊರೊನಾದಂತಹ ಈ ಕಷ್ಟಕಾಲದಲ್ಲಿ ಸರ್ಕಾರ ಜನರ ರಕ್ಷಣೆಯ ಹೊಣೆ ಹೊತ್ತಿರುವ ಹಾಗೆ, ದರ್ಶನ್ ಅವರು ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ, ಅವರಿಗೆ ಕೃತಜ್ಞತೆಗಳು. ಹಾಗೆಯೇ ಪ್ರಾಣಿ ದತ್ತು ಪಡೆಯಲು ದೇಣಿಗೆ ನೀಡಿದ ಎಲ್ಲ ಪ್ರಾಣಿಪ್ರಿಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಾಣಿ ಪ್ರಿಯರು ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಬೇಕು ಮತ್ತು ಈ ಉದ್ದೇಶಕ್ಕಾಗಿ ಹೆಚ್ಚಿನ ನೆರವು ನೀಡಬೇಕು ಎಂದು ಸಚಿವರು ಸಹ ಮನವಿ ಮಾಡಿದ್ದಾರೆ.

(ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಚಾಲೆಂಜಿಂಗ್ ಸ್ಟಾರ್ ಮನವಿ.. ವಿಡಿಯೋ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.