ಮೈಸೂರು: ಕುವೆಂಪು ನಗರದ ಮರಳು ಸಿದ್ದೇಶ್ವರ ದೇವಾಲಯದಲ್ಲಿ ನಡೆದ ಎರಡು ಬಡ ಕುಟುಂಬದ ಸರಳ ವಿವಾಹಕ್ಕೆ ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಬಳಗ ನೆರವಾಗಿದೆ.
ತಂದೆ-ತಾಯಿಯನ್ನು ಕಳೆದುಕೊಂಡು ಅಕ್ಕ-ಬಾವನ ಮನೆಯಲ್ಲಿ ಆಶ್ರಯ ಪಡೆದಿದ್ದ ಹಾಸನ ಜಿಲ್ಲೆ ಬೇಲೂರು ನಿವಾಸಿ ಪ್ರಮೀಳಾ ಮತ್ತು ಮೈಸೂರಿನ ಕೆಸರೆ ನಿವಾಸಿ ಕೆ.ಮಂಜುನಾಥ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಸುತ್ತಿದ್ದ ಇವರಿಬ್ಬರ ಮದುವೆ ಕಳೆದ ತಿಂಗಳು ನೆರವೇರಬೇಕಾಗಿತ್ತು. ಆದರೆ ಲಾಕ್ಡೌನ್ ಪರಿಣಾಮ ಮದುವೆ ಮಾಡಲು ಸಾಧ್ಯವಾಗಿರಲಿಲ್ಲ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮಲೆಯೂರು ಗ್ರಾಮದ ಎನ್.ಸುನಿಲ್ ಮತ್ತು ಮೈಸೂರು ತಾಲೂಕು ಹಡಜನ ಗ್ರಾಮದ ತಂದೆ-ತಾಯಿ ಕಳೆದುಕೊಂಡಿರುವ ವಿಜಯ ಎಂಬುವರ ಮದುವೆ ಸಹ ಕಳೆದ ತಿಂಗಳು ನಿಗದಿಯಾಗಿತ್ತಾದರೂ ಕೊರೊನಾ ಭೀತಿಯಿಂದಾಗಿ ರದ್ದಾಗಿತ್ತು.
ಇಂದು ಈ ಎರಡು ಜೋಡಿಗಳು ಸರಳವಾಗಿ ಮದುವೆಗೆಯಾಗಿದ್ದು, ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗದ ಮಹದೇವಸ್ವಾಮಿ ಹಾಗೂ ಲಕ್ಷ್ಮೀದೇವಿ ಸೇರಿದಂತೆ ಇನ್ನಿತರ ಪ್ರಮುಖರು ಮುಂದಾಳತ್ವ ವಹಿಸಿ ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ವಿವಾಹ ನೆರವೇರಿಸಿದ್ದಾರೆ.