ಮೈಸೂರು: ಅರ್ಜುನ ಅಂಬಾರಿ ಹೊರಲು ಶುರು ಮಾಡಿ 8 ವರ್ಷ ಕಳೆಯುತ್ತಿದೆ. ಆದರೆ, ಬ್ಯಾನರ್ಗಳಲ್ಲಿ ಮಾತ್ರ ಇನ್ನೂ ಬಲರಾಮನೇ ಅಂಬಾರಿ ಹೊರುತ್ತಿದ್ದಾನೆ. ದಸರಾ ಸಾಂಸ್ಕೃತಿಕ ಯಡವಟ್ಟು... ಹಳೆ ಬೋಡ್೯, ಹೊಸ ಬಿಲ್ಲಿಗೆ ಅಧಿಕಾರಿಗಳು ಹಾತೊರೆಯುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಮೈಸೂರು ದಸರಾ ಸಾಂಸ್ಕೃತಿಕ ಉಪಸಮಿತಿ ಪ್ರಕಾರ ಇಂದಿಗೂ ಬಲರಾಮನೇ ಅಂಬಾರಿ ಹೊರುತ್ತಿದ್ದಾನೆ. ಇದನ್ನ ನಾವು ಹೇಳ್ತಿಲ್ಲ, ಜಗನ್ಮೋಹನ ಅರಮನೆಯ ದಸರಾ ಕಾರ್ಯಕ್ರಮದ ಸ್ವಾಗತ ಕಮಾನಿನ ಫ್ಲೆಕ್ಸ್ ಇಂತಹ ಮಾಹಿತಿ ಒದಗಿಸುತ್ತಿದೆ. 2011 ರಲ್ಲಿ ಕೊನೆ ಬಾರಿಗೆ ಅಂಬಾರಿ ಹೊತ್ತ ಬಲರಾಮ ಆನೆಯ ಫೋಟೋ ರಾರಾಜಿಸುತ್ತಿದೆ. ಸಾಂಸ್ಕೃತಿಕ ಉಪಸಮಿತಿ ಯಡವಟ್ಟಿನಿಂದ ಇಂತಹ ತಪ್ಪು ಮಾಹಿತಿ ಜನರಿಗೆ ತಲುಪುತ್ತಿದೆ. ಈ ವರ್ಷ 8 ನೇ ಬಾರಿಗೆ ಅರ್ಜುನ ಅಂಬಾರಿಯನ್ನ ಹೊರುತ್ತಿದ್ದರೂ ಪಾಪ ಬಲರಾಮನನ್ನ ಉಪಸಮಿತಿ ಸದಸ್ಯರು ಮರತೇ ಇಲ್ಲ.
ಸೋಮವಾರ ಜೆ.ಕೆ.ಮೈದಾನದಲ್ಲಿ ಮಹಿಳಾ ದಸರಾದಲ್ಲಿ ಮಾಜಿ ಸಚಿವೆ ಉಮಾಶ್ರೀ ಭಾವಚಿತ್ರಕ್ಕೆ ಸ್ಟಿಕ್ಕರ್ ಅಂಟಿಸಿ ಯಡವಟ್ಟು ಮಾಡಿದ್ದ ಅಧಿಕಾರಿಗಳು, ಇಲ್ಲೂ ಅದೇ ಯಡವಟ್ಟು ಮಾಡಿದ್ದಾರೆ. ಸಚಿವ ವಿ.ಸೋಮಣ್ಣ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ,ಹಳೆ ಬಿಲ್ಲು ನೀಡಿ ದುಡ್ಡು ಪಡೆಯಬೇಡಿ ಅಂದಿದ್ರು. ದಸರಾ ಆಚರಣೆಯಲ್ಲಿ ವರ್ಷಗಳು ಉರುಳುತ್ತಿದ್ದರೂ ಅಧಿಕಾರಿಗಳಿಗೆ ಹಳೇ ಪೋಸ್ಟರ್ಗಳನ್ನೇ ಬಳಸುವ ಖಯಾಲಿಗೆ ಇದೊಂದು ನಿದರ್ಶನವಾಗಿದೆ.