ಮೈಸೂರು: ವಿಜಯೇಂದ್ರ ಯಾವಾಗ ಏನಾಗುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ನನಗೆ ಪಕ್ಷದಿಂದ ರಾಜ್ಯದ ಜವಾಬ್ದಾರಿ ಸಿಕ್ಕಿದೆ. ಅದನ್ನು ಉಪಯೋಗಿಸಿಕೊಂಡು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಎಂಎಲ್‌ಸಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನ ಪರಿಷತ್ ಟಿಕೆಟ್ಗಾಗಿ ಸಾಕಷ್ಟು ಜನ ಕಾರ್ಯಕರ್ತರು ಇದ್ದಾರೆ. ವಿಧಾನ ಪರಿಷತ್ ಆಯ್ಕೆ ಪಕ್ಷದಲ್ಲಿ ಅನೇಕ ಮಾನದಂಡ ಇರುತ್ತದೆ. ರಾಜ್ಯದ ಯುವಕರಿಗೆ ಟಿಕೆಟ್ ಸಿಗುವ ಬಗ್ಗೆ ನಿರೀಕ್ಷೆ ಸಾಮಾನ್ಯವಾಗಿ ಇರುತ್ತೆ. ಬಿ.ಎಲ್.ಸಂತೋಷ್ರಿಂದ ಟಿಕೆಟ್ ಮಿಸ್ ಆಗಿಲ್ಲ ಎಂದೂ ಇದೇ ವೇಳೆ ಸ್ಪಷ್ಟನೆ ನೀಡಿದರು.
ಚುನವಾಣಾ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪ ಭಾವಚಿತ್ರ ಕೈಬಿಟ್ಟ ವಿಚಾರವಾಗಿ ಮಾತನಾಡಿ, ಯಾರು ಕೈ ಬಿಟ್ಟಿದ್ದಾರೆ ಅವರನ್ನೇ ಕೇಳಬೇಕು. ಯಡಿಯೂರಪ್ಪ ಅವರು ಪಕ್ಷ ಕಟ್ಟಿದವರು. ಗ್ರಾಮೀಣಾ ಭಾಗದಿಂದಲೂ ಬಿಜೆಪಿ ಪಕ್ಷವನ್ನು ಕಟ್ಟಿದವರು. ಎಂಎಲ್‌ಸಿ ಟಿಕೇಟ್ ಕೈ ತಪ್ಪಿದ್ದರಿಂದ ಅವರಿಗೆ ಹಿನ್ನೆಡೆ ಆಗಿಲ್ಲ. ನನ್ನ ಮಗನನ್ನು ಎಂಎಲ್‌ಸಿ ಮಾಡಿ ಎಂದು ಯಾರ ಹತ್ತಿರವೂ ಅವರು ವಕಾಲತ್ತು ಮಾಡಿರಲಿಲ್ಲ ವಿಜಯೇಂದ್ರ ಏನಾಗಬೇಕೆಂದು ಎಂದು ಪಕ್ಷ ಮುಂದೆ ತೀರ್ಮಾನ ಮಾಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹೈಕಮಾಂಡ್ ನಿರ್ಧಾರವನ್ನ ವಿಜಯೇಂದ್ರ ಒಪ್ಪಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ