ETV Bharat / city

ಜಿಂಕೆ ಚರ್ಮ ಮಾರಾಟ ಮಾಡಲು ಸಹೋದರರ ಯತ್ನ: ಓರ್ವ ಬಂಧನ ಮತ್ತೊಬ್ಬ ಪರಾರಿ

ಖಚಿತ ಮಾಹಿತಿ ಮೇರೆಗೆ ಸಹೋದರರಾದ ಆರೋಪಿಗಳು ಜಿಂಕೆ ಚರ್ಮವನ್ನು ಬೈಕ್​ನಲ್ಲಿ ಸಾಗಣೆ ಮಾಡುವಾಗ ದಾಳಿ ನಡೆಸಿ ಬಂಧಿಸಿದ್ದಾರೆ.

ಜಿಂಕೆ ಮಾರಾಟ ಮಾಡಲು ಸಹೋದರರ ಯತ್ನ
author img

By

Published : Mar 21, 2019, 4:23 AM IST

Updated : Mar 21, 2019, 6:42 AM IST

ಮೈಸೂರು: ಅರಣ್ಯ ಸಂಚಾರಿದಳ ಹಾಗೂ ವಿರಾಜಪೇಟೆ ಅರಣ್ಯ ಸಂಚಾರಿದಳ ಮಿಂಚಿನದಾಳಿ ನಡೆಸಿ ಜಿಂಕೆಚರ್ಮ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.

ಹೆಚ್.ಡಿ.ಕೋಟೆ ತಾಲ್ಲೂಕಿನ ಕಾರಾಪುರ ಗ್ರಾಮದ ಶ್ರೀನಿವಾಸ(೨೭) ಬಂಧಿತ ವ್ಯಕ್ತಿ. ತಾಲೂಕಿನ ಕೆ.ಎಡತೊರೆ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಬೈಕ್​ನಲ್ಲಿ ಜಿಂಕೆ ಚರ್ಮ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು, ಕೂಡಲೇ ಸಂಚಾರಿದಳದವರು ದಾಳಿ ನಡೆಸಿ ಶ್ರೀನಿವಾಸನನ್ನು ವಶಕ್ಕೆ ಪಡೆದಿದ್ದಾರೆ. ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿ ಸಹೋದರ ಪ್ರಸನ್ನ ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಬಂಧಿತನಿಂದ ಜಿಂಕೆಚರ್ಮ ಹಾಗೂ ಬೈಕ್​ನ್ನು ಅರಣ್ಯ ಸಂಚಾರಿದಳ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.

ಅರಣ್ಯ ಸಂಚಾರಿದಳದ ಸಬ್​ಇನ್ಸ್​ಫೆಕ್ಟರ್​ ಎಂ.ಬಿ.ರಮೇಶ್, ಸಿಬ್ಬಂದಿಗಳಾದ ವೆಂಕಟಚಲಯ್ಯ, ಎಚ್.ನರಸಿಂಹಮೂರ್ತಿ, ಎಲ್.ಮಂಜುನಾಥ್, ಪ್ರದೀಪ, ವಿರಾಜಪೇಟೆ ಸಿಬ್ಬಂದಿಗಳಾದ ಸೋಮಣ್ಣ, ಪಿರಾಣ್ಣಪ್ಪ, ಮಂಜುನಾಥ್, ಗಣೇಶ, ದೇವಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಜಿಂಕೆ ಮಾರಾಟಮಾಡಲು ಸಹೋದರರ ಯತ್ನ, ಓರ್ವ ಬಂಧನ ಮತ್ತೊಬ್ಬ ಪರಾರಿ 
ಮೈಸೂರು: ಅರಣ್ಯ ಸಂಚಾರಿದಳ ಹಾಗೂ ವಿರಾಜಪೇಟೆ ಅರಣ್ಯ ಸಂಚಾರಿದಳ ಮಿಂಚಿನದಾಳಿ ನಡೆಸಿ ಜಿಂಕೆಚರ್ಮ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ಸಹೋದರ  ಪರಾರಿಯಾಗಿದ್ದಾನೆ.
ಎಚ್.ಡಿ.ಕೋಟೆ ತಾಲ್ಲೂಕಿನ ಕಾರಾಪುರ ಗ್ರಾಮದ ಶ್ರೀನಿವಾಸ(೨೭) ಬಂಧಿತ ವ್ಯಕ್ತಿ. ಈತ ತಾಲ್ಲೂಕಿನ ಕೆ.ಎಡತೊರೆ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಇಬ್ಬರು ಬೈಕ್(ಕೆಎ೦೯, ಇಜಿ ೨೩೩೪)ನಲ್ಲಿ ಜಿಂಕೆ ಚರ್ಮ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು, ಕೂಡಲೇ ಸಂಚಾರಿದಳದವರು ದಾಳಿ ನಡೆಸಿ ಶ್ರೀನಿವಾಸನನ್ನು ವಶಕ್ಕೆ ಪಡೆದಿದ್ದಾರೆ. ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿ ಸಹೋದರ ಪ್ರಸನ್ನ ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಬಂಧಿತನಿಂದ  ಜಿಂಕೆಚರ್ಮ ಹಾಗೂ ಬೈಕಅನ್ನು ಅರಣ್ಯ ಸಂಚಾರಿದಳ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. 
ಅರಣ್ಯ ಸಂಚಾರಿದಳದ ಸಬ್‌ಇನ್‌ಸ್ಪೆಕ್ಟರ್ ಎಂ.ಬಿ.ರಮೇಶ್, ಸಿಬ್ಬಂದಿಗಳಾದ ವೆಂಕಟಚಲಯ್ಯ, ಎಚ್.ನರಸಿಂಹಮೂರ್ತಿ, ಎಲ್.ಮಂಜುನಾಥ್, ಪ್ರದೀಪ, ವಿರಾಜಪೇಟೆ ಸಿಬ್ಬಂದಿಗಳಾದ ಸೋಮಣ್ಣ, ಪಿರಾಣ್ಣಪ್ಪ, ಮಂಜುನಾಥ್, ಗಣೇಶ, ದೇವಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 

Last Updated : Mar 21, 2019, 6:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.