ETV Bharat / city

ಕುರಿ - ಮೇಕೆ ಮಾರಾಟಕ್ಕೆ ಆಂಡ್ರಾಯ್ಡ್ ಆ್ಯಪ್.. ಇದರ ಉಪಯೋಗ ಹಲವು - Karnataka Sheep and Wool Development Corporation

ಕುರಿ ಮತ್ತು ಮೇಕೆ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಆ್ಯಪ್​ ಅಭಿವೃದ್ಧಿ ಪಡಿಸಿರುವ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು, ಆ್ಯಪ್​ ಮುಖಾಂತರವೇ ವ್ಯವಹಾರ ನಡೆಸುವ ಮಹತ್ವದ ಹೆಜ್ಜೆ ಇಟ್ಟಿದೆ.

android-app-developed-for-selling-sheep-and-goats
ಕುರಿ - ಮೇಕೆ ಮಾರಾಟಕ್ಕೆ ಆಂಡ್ರಾಯ್ಡ್ ಆ್ಯಪ್, ಏನಿದರ ಉಪಯೋಗ?
author img

By

Published : Aug 20, 2022, 9:03 PM IST

ಮೈಸೂರು: ದಲ್ಲಾಳಿಗಳಿಂದ ವಂಚನೆಯ ತಪ್ಪಿಸಲು ಹಾಗೂ ಲಾಭ ನೇರವಾಗಿ ಸಾಗಾಣಿಕೆದಾರರಿಗೆ ಸಿಗಲು ಕುರಿ ಮತ್ತು ಮೇಕೆ ಮಾರಾಟಕ್ಕೆ ಆಂಡ್ರಾಯ್ಡ್ ಆ್ಯಪ್​ನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಪ್ರಾಯೋಗಿಕವಾಗಿ ಅಭಿವೃದ್ಧಿ ಪಡಿಸಿದೆ.

ಕುರಿ ಮತ್ತು ಮೇಕೆಗಳನ್ನು ಮಾರಾಟ ಮಾಡುವ ರೈತರು ಮತ್ತು ಸಾಗಣಿಕೆದಾರರ ಲಾಭಾಂಶ ಸಂತೆಗಳಲ್ಲಿ ಮಧ್ಯವರ್ತಿಗಳ ಪಾಲಾಗುತ್ತಿದ್ದು, ಇದರಿಂದ ನೇರವಾಗಿ ರೈತರಿಗೇ ವಂಚನೆ ಆಗುತ್ತಿತ್ತು. ಇದನ್ನು ತಪ್ಪಿಸಲೆಂದೇ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಭಾರತದಲ್ಲೇ ಮೊದಲ ಬಾರಿಗೆ ಕುರಿ ಮತ್ತೆ ಮೇಕೆ ಮಾರಾಟಕ್ಕೆ ಈ ಆ್ಯಪ್​ ಕಂಡು ಹಿಡಿದಿದೆ.

ಸರ್ಕಾರದ ನಿಗಮವು ಅಭಿವೃದ್ಧಿ ಪಡಿಸಿದ ಈ ಆ್ಯಪ್​ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶ್ಲಾಘಿಸಿದ್ದಾರೆ. ಈ ಆ್ಯಪ್​ನ ಬಗ್ಗೆ ರೈತರಿಗೆ ಮತ್ತು ಸಾಕಾಣಿಕೆ ಮಾಡುವವರಿಗೆ ಅರಿವು ಮೂಡಿಸಲು ಕಾರ್ಯಾಗಾರವನ್ನೂ ಹಮ್ಮಿಕೊಂಡಿದ್ದು, ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?. ಇದರ ಅನುಕೂಲ ಏನು?, ರೈತರು ಯಾವ ರೀತಿ ಬಳಸಬೇಕು ಎಂಬ ಬಗ್ಗೆ ನಿಗಮದ ಸಹಾಯಕ ನಿರ್ದೇಶಕ ಡಾ. ಪೂಣಾನಂದ ಅವರು 'ಈಟಿವಿ ಭಾರತ'ಕ್ಕೆ ನೀಡಿರುವ ಕಿರು ಸಂದರ್ಶನದಲ್ಲಿ ವಿವರಿಸಿದ್ದಾರೆ.

ಎನ್ಇಎಂಎಲ್​ ಆ್ಯಪ್​ನ ಕಾರ್ಯ ಚಟುವಟಿಕೆ: ಕುರಿಗಾರ ಮತ್ತು ಗ್ರಾಹಕರ ನಡುವಿನ ದಲ್ಲಾಳಿಗಳ ಹಾವಳಿ ತಪ್ಪಿಸುವುದು, ನ್ಯಾಯಯುತ ಬೆಲೆ ಕುರಿಗಾಯಿಗೆ ದೊರೆಯುವಂತೆ ಮಾಡುವುದೇ ಈ ಎನ್ಇಎಂಎಲ್​ ಆ್ಯಪ್​ನ ಉದ್ದೇಶ. ಇಂದಿನ ವಿದ್ಯಮಾನದಲ್ಲಿ ಪತ್ರಿಯೊಬ್ಬರು ಮೊಬೈಲ್ ಬಳಕೆ ಮಾಡುತ್ತಿದ್ದು, ಡಿಜಿಟಲ್​ಗೆ ಮೊರೆ ಹೋಗಿದ್ದಾರೆ. ಅದನ್ನು ಬಳಸಿಕೊಂಡು ಡಿಜಿಟಲ್ ಮೂಲಕ ನ್ಯಾಯಯುತ ಬೆಲೆ ಮತ್ತು ಲಾಭಾಂಶವನ್ನು ಕುರಿ ಸಾಕಾಣಿಕೆ ಮಾಡುವವರಿಗೆ ಕಲ್ಪಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಪೂರ್ಣಾನಂದ.

ಈ ಆ್ಯಪ್​ನ್ನು ಪ್ಲೇಸ್ಟೋರ್​ನಲ್ಲಿ ಡೌನ್​ಲೋಡ್ ಮಾಡಬಹುದು. ಡೌನ್​ಲೋಡ್ ಮಾಡಿದ ನಂತರ ಅದು ಕೇಳುವ ದಾಖಲಾತಿಗಳನ್ನು ನೀಡುತ್ತಾ ಹೋಗಬೇಕಷ್ಟೇ. ಇದು ತುಂಬಾ ಸರಳ ವಿಧಾನದಲ್ಲಿದ್ದು, ಎಲ್ಲರೂ ಬಳಸಬಹುದಾಗಿದೆ ಎಂದೂ ತಿಳಿಸಿದರು.

ಕುರಿ - ಮೇಕೆ ಮಾರಾಟಕ್ಕೆ ಆಂಡ್ರಾಯ್ಡ್ ಆ್ಯಪ್, ಏನಿದರ ಉಪಯೋಗ?

ಆ್ಯಪ್​ನಿಂದ ರೈತರಿಗೆ ಅನುಕೂಲ ಹೇಗೆ?: ರೈತನು ತನ್ನ ಬಳಿಯಿರುವ ಕುರಿಗಳನ್ನು ತೂಕ ಮಾಡಿ ಅವುಗಳ ತೂಕದ ಜೊತೆ ನ್ಯಾಯಯುತವಾದ ಬೆಲೆಯನ್ನು ಆ್ಯಪ್​ನಲ್ಲಿ ನಮೂದಿಸಬೇಕು. ಅದನ್ನು ಖರೀದಿ ಮಾಡಲು ಇಚ್ಛೆ ಪಡುವ ಗ್ರಾಹಕನಿಗೆ ತಲುಪುತ್ತದೆ. ಆ ಮೂಲಕ ಡಿಜಿಟಲ್ ಮುಖಾಂತರ ವ್ಯವಹಾರ ನಡೆಯುತ್ತದೆ. ಕುರಿಯನ್ನು ಕೊಳ್ಳುವವನು ಕೈ ಮೂಲಕ ಹಣ ನೀಡುವ ಪ್ರಕ್ರಿಯೆ ಇದರಲ್ಲಿ ಇಲ್ಲ. ಎಲ್ಲವೂ ಡಿಜಿಟಲ್ ಮೂಲಕ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕುರಿಗಾರನು ನಮೂದಿಸಿದ ಬೆಲೆಗಿಂತ ಹೆಚ್ಚು ಅಥವಾ ಕಡಿಮೆ ಬೆಲೆ ಗ್ರಾಹಕನು ನಮೂದಿಸಿದರೆ ಕುರಿಗಾಯಿಯು ಅದನ್ನು ಬೇಕಿದ್ದಲ್ಲಿ ಒಪ್ಪಬಹುದು, ಇಲ್ಲ ತಿರಸ್ಕರಿಸುವ ಅವಕಾಶ ಆತನ ಬಳಿಯಿರುತ್ತದೆ. ಈ ರೀತಿ ಆ್ಯಪ್ ಕಾರ್ಯ ನಿರ್ವಹಿಸುತ್ತದೆ. ಹೀಗೆ ಕುರಿ ಮಾರಾಟದ ಹಿಡಿತ ರೈತ ಮತ್ತು ಗ್ರಾಹಕನಿಗೆ ದೊರೆಯುವಂತೆ ಮಾಡುವುದಾಗಿದೆ. ಅದರಿಂದ ದಲ್ಲಾಳಿಗಳ ಮೋಸ ತಪ್ಪಿಸಬಹುದಾಗಿದೆ. ಜೊತೆಗೆ ಈ ಎನ್​ಇಎಂಎಲ್​ ಆ್ಯಪ್ ಕೇವಲ ಕುರಿ ಮಾರಾಟ ಮಾತ್ರವಲ್ಲದೇ, ಪಶು ಸಂಗೋಪನೆ, ಹಾಲಿನ ಉತ್ಪನ್ನ ಹಾಗೂ ಇನ್ನಿತರ ವಿಭಾಗಗಳಲ್ಲಿ ತನ್ನ ಛಾಪು ಮೂಡಿಸುತ್ತಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಚಾಟಿಯೆಸ್ಟ್​ ರಾಜ್ಯಗಳ ಪಟ್ಟಿ .. ಕರ್ನಾಟಕ ಮೊದಲು ತೆಲಂಗಾಣ ಟಾಪ್ 5

ETV Bharat Logo

Copyright © 2025 Ushodaya Enterprises Pvt. Ltd., All Rights Reserved.