ಮೈಸೂರು : ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಸುಕ್ಷೇತ್ರದ ಅದ್ಧೂರಿ ಜಾತ್ರೋತ್ಸವವನ್ನು ಕೊರೊನಾ ಕಾರಣಕ್ಕಾಗಿ ರದ್ದು ಮಾಡಲಾಗಿದೆ.
ಜ.28 ರಿಂದ ಫೆ.7ರವರೆಗೆ ಅದ್ದೂರಿಯಾಗಿ ನಡೆಯಬೇಕಾಗಿದ್ದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವನ್ನು ಸರ್ಕಾರದ ನಿರ್ಬಂಧಗಳ ಹಿನ್ನೆಲೆ ರದ್ದುಪಡಿಸಲಾಗಿದೆ.
ಜಾತ್ರೆ ರದ್ದಾದ ಹಿನ್ನೆಲೆ ಸೇವಾರ್ಥದಾರರು, ಭಕ್ತಾದಿಗಳು ಹಾಗೂ ಸಾರ್ವಜನಿಕರನ್ನ ಶ್ರೀಕ್ಷೇತ್ರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೇ, ಜನವರಿ 26 ಮತ್ತು 30ರಂದು ಸಾಂಪ್ರದಾಯಿಕ, ಸಾಂಕೇತಿಕವಾಗಿ ಧಾರ್ಮಿಕ ಆಚರಣೆಗಳು ನಡೆಯಲಿವೆ.
ಇದನ್ನು http://Youtube.com/c/JSSMahavidyapeethaonline, https://www.facebook.com/JSSMVP ನಲ್ಲಿ ಭಕ್ತರು ವೀಕ್ಷಿಸಬಹುದಾಗಿದೆ. ಎಲ್ಲರೂ ಈ ವಿಷಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಶ್ರೀಕ್ಷೇತ್ರಕ್ಕೆ ಆಗಮಿಸದೆ ಸಹಕರಿಸಬೇಕಾಗಿ ದೇವಸ್ಥಾನದ ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ ಕೋರಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ? ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿದೆಯಾ?