ETV Bharat / city

ರಸ್ತೆ ಮಧ್ಯೆ ಹೊತ್ತಿ ಉರಿದ ಸ್ಕೂಟರ್​: ಒಬ್ಬನ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ - ಮೈಸೂರು ರಸ್ತೆ ಅಪಘಾತ

ನಿನ್ನೆ ಸಂಜೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ ಸ್ಕೂಟರ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಒಬ್ಬ ಸವಾರ ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆ ಮಧ್ಯ ಹೊತ್ತಿ ಉರಿದ ಸ್ಕೂಟರ್
ರಸ್ತೆ ಮಧ್ಯ ಹೊತ್ತಿ ಉರಿದ ಸ್ಕೂಟರ್
author img

By

Published : Jun 25, 2022, 8:55 AM IST

ಮೈಸೂರು: ನಡುರಸ್ತೆ ಮೇಲೆ ಸ್ಕೂಟರ್​ವೊಂದು ಹೊತ್ತಿ ಉರಿದಿದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ ನಡೆದಿದೆ. ನಿನ್ನೆ ಸಂಜೆ ಮೈಸೂರು ಮೂಲದ ಶಿವರಾಮು ಹಾಗೂ ಅನಂತ ರಾಮಯ್ಯ ಎಂಬುವರು ಸ್ಕೂಟರ್​​ನಲ್ಲಿ ಕೆ.ಆರ್ ಪೇಟೆ ಕಡೆಗೆ ಹೊರಟಿದ್ದಾಗ ಈ ದುರಂತ ಸಂಭವಿಸಿದೆ.

ರಸ್ತೆ ಮಧ್ಯ ಹೊತ್ತಿ ಉರಿದ ಸ್ಕೂಟರ್

ರಸ್ತೆ ಮಧ್ಯೆ ಸ್ಕೂಟರ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಾರ್ವಜನಿಕರು ಇಬ್ಬರು ಸವಾರರನ್ನು ರಕ್ಷಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಿವರಾಮು ಎಂಬುವರು ಕಳೆದ ರಾತ್ರಿ ಮೈಸೂರಿನ ಕೆ. ಆರ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇವರಿಬ್ಬರೂ ಮೈಸೂರಿನ ಸಿದ್ದಾರ್ಥ ನಗರದ ನಿವಾಸಿಗಳು ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಅಪ್ರಾಪ್ತೆಗೆ ಬೆದರಿಸಿ ಅತ್ಯಾಚಾರ ಎಸಗಿದವನಿಗೆ 10 ವರ್ಷ ಜೈಲು ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.