ಮೈಸೂರು: ರೈತನೊಬ್ಬ ಸಾಲಬಾಧೆ ತಾಳಲಾರದೆ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕಿನ ಮೊಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಮೊಬ್ಬಳ್ಳಿ ಗ್ರಾಮದ ನಿವಾಸಿ ಮುದ್ರಾಮು (48) ಮೃತ ರೈತ.
ಸಾಲದಿಂದ ಬೇಸತ್ತು ತನ್ನ ಸ್ವಂತ ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳೆ ಬೆಳೆಯಲು ಬ್ಯಾಂಕಿನಲ್ಲಿ 85,000 ಸಾಲ ಪಡೆದುಕೊಂಡಿದ್ದು ಜೊತೆಗೆ 50,000 ಸಾವಿರ ಕೈಸಾಲ ಮಾಡಿಕೊಂಡಿದ್ದ. ಹಣ ಮರುಪಾವತಿ ಮಾಡಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.