ಮೈಸೂರು : ಮಾಂಸಕ್ಕಾಗಿ ಜಿಂಕೆಯನ್ನು ಬೇಟೆ ಆಡುತ್ತಿದ್ದ 6 ಜನರನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಂಜನಗೂಡಿನ ನಾಗಣಾಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.
ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಜಿಂಕೆಗಳನ್ನು ಮಾಂಸಕ್ಕಾಗಿ ಬೇಟೆ ಆಡುತ್ತಿದ್ದ ಸೋಮವಾರಪೇಟೆಯ 6 ಮಂದಿ ಬೇಟೆಗಾರರನ್ನು ಅರಣ್ಯ ಇಲಾಖೆಯ ಆರ್.ಎಫ್.ಒ ನಾಗೇಂದ್ರ ನಾಯಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ನಂಜನಗೂಡು ತಾಲೂಕಿನ ನಾಗಣಾಪುರ ಗ್ರಾಮದ ಬಸವರಾಜು ಎಂಬುವರ ತೋಟದ ಮನೆಯಲ್ಲಿದ್ದ ಬೇಟೆಗಾರರನ್ನು ಬಂಧಿಸಿದ್ದಾರೆ .
ಇನ್ನು ಬಂಧಿತರಿಂದ ಬೇಟೆಗೆ ಬಳಸಿದ್ದ ಸಲಕರಣೆಗಳು, 3 ಜಿಂಕೆ ಹಾಗೂ ಓಮಿನಿ ಕಾರು ಮತ್ತು ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.