ಮೈಸೂರು: ಕೊರೊನಾ ಅಟ್ಟಹಾಸಕ್ಕೆ 8 ಮಂದಿ ಸಾವನಪ್ಪಿದ್ದಾರೆ. 187 ಮಂದಿಗೆ ಇಂದು ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಂಖ್ಯೆ 2632ಕ್ಕೆ ತಲುಪಿದೆ.
ಸೋಂಕಿತರ ಸಂಪರ್ಕದಿಂದ 104, ಐಎಲ್ಐ ಪ್ರಕರಣದಡಿ 20, ಎಸ್ಎಆರ್ಐ ಪ್ರಕರಣದಡಿ 7, ಪ್ರಯಾಣದ ಹಿನ್ನೆಲೆಯುಳ್ಳವರು 26, ರೋಗದ ಲಕ್ಷಣ ಇರುವವರು ಸೇರಿದಂತೆ ಒಟ್ಟಾರೆ 187 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
58 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 2632 ಸೋಂಕಿತರ ಪೈಕಿ 808 ಮಂದಿ ಕೊರೊನಾ ಗೆದ್ದು ಮನೆ ಸೇರಿದ್ದಾರೆ. ಸದ್ಯ 1722 ಮಂದಿ ವಿವಿಧ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.107 ಮಂದಿ ಈವರೆಗೆ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ತಿಳಿಸಿದ್ದಾರೆ.