ETV Bharat / city

ಶ್ರವಣ ದೋಷವುಳ್ಳ ಮಕ್ಕಳ ಶಾಲೆಯಿಂದ 18 ಮಕ್ಕಳು‌ ನಾಪತ್ತೆ: ವಾರ್ಡನ್ ಹೇಳೋದೇನು?

author img

By

Published : Jun 22, 2021, 2:11 PM IST

Updated : Jun 22, 2021, 2:24 PM IST

ಮೈಸೂರಿನ ತಿಲಕ್ ನಗರದಲ್ಲಿರುವ ಶ್ರವಣ ದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಿಂದ ಕಳೆದ 5 ವರ್ಷಗಳಿಂದ 18 ಮಕ್ಕಳು‌ ಕಾಣೆಯಾಗಿದ್ದು, ಈ ಪೈಕಿ ಮೂವರು ಸಿಕ್ಕಿದ್ದಾರೆ.

Mysuru
ಶ್ರವಣ ದೋಷವುಳ್ಳ ಮಕ್ಕಳ ಶಾಲೆಯಿಂದ 18 ಮಕ್ಕಳು‌ ನಾಪತ್ತೆ

ಮೈಸೂರು: ನಗರದ ತಿಲಕ್ ನಗರದಲ್ಲಿರುವ ಶ್ರವಣ ದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಿಂದ ಕಳೆದ 5 ವರ್ಷಗಳಿಂದ 18 ಮಕ್ಕಳು‌ ಕಾಣೆಯಾಗಿದ್ದಾರೆ. ಈ ಪೈಕಿ ಮೂವರು ಸಿಕ್ಕಿದ್ದು ಮತ್ತೆ ಕೆಲವು ಮಕ್ಕಳು ಸಿಕ್ಕಿದ್ದರೂ 2ನೇ ಬಾರಿ ಓಡಿಹೋಗಿದ್ದಾರೆ.

ಶ್ರವಣ ದೋಷವುಳ್ಳ ಮಕ್ಕಳ ಶಾಲೆಯಿಂದ 18 ಮಕ್ಕಳು‌ ನಾಪತ್ತೆ ಬಗ್ಗೆ ವಾರ್ಡನ್ ಪ್ರತಿಕ್ರಿಯೆ

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಲೆಯ ವಾರ್ಡ್​ನ್ ಮಂದಣ್ಣ, ಜಿಲ್ಲಾ ಮಕ್ಕಳ ಸಮಿತಿಯವರು (ಸಿಸಿಡ್ಲ್ಯೂ) ಕಿವುಡು ಮಕ್ಕಳನ್ನು ಇಲ್ಲಿಗೆ ತಂದು ಬಿಡುತ್ತಾರೆ. ಇಲ್ಲಿಗೆ ಬರುವ ಈ ಮಕ್ಕಳಿಗೆ ವಿದ್ಯಾಭ್ಯಾಸ ಇರುವುದಿಲ್ಲ. ಅಪ್ಪ, ಅಮ್ಮನ ಹೆಸರನ್ನೂ ಹೇಳಲು ಬರುವುದಿಲ್ಲ. ಕಳೆದ 5 ವರ್ಷಗಳಿಂದ ಇದ್ದಕ್ಕಿದ್ದಂತೆ 18 ಮಕ್ಕಳು ಕಾಣೆಯಾಗಿದ್ದಾರೆ. ಅವರು ಎಲ್ಲಿಗೆ ಹೋಗ್ತಾರೆ, ಏನ್​ ಮಾಡ್ತಾರೆ ಅನ್ನೋದನ್ನು ನಮಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಇದ್ದಕ್ಕಿದ್ದಂತೆ ರೈಲು ಮತ್ತು ಲಾರಿಗಳನ್ನು ಹತ್ತಿ ಎಲ್ಲಿಗೋ ಹೋಗಿ ಬಿಡ್ತಾರೆ. ಓದಲು, ಬರೆಯಲು ಬಾರದ ಕಾರಣ ಅವರಿಗೆ ವಾಪಸ್ ಬರಲು ಗೊತ್ತಾಗುವುದಿಲ್ಲ.

ನಾಪತ್ತೆಯಾದ 18 ಮಕ್ಕಳ ಪೈಕಿ ಮೂವರು ಸಿಕ್ಕಿದ್ದಾರೆ. ಅವರನ್ನು ಪೋಷಕರಿಗೆ ಒಪ್ಪಿಸಿದ್ದೇವೆ. ಮತ್ತೆ ಕೆಲವರು 2ನೇ ಬಾರಿ ಓಡಿಹೋಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಇಲ್ಲಿ ಭದ್ರತಾ ಸಿಬ್ಬಂದಿ ಕೊರತೆಯಿರುವ ಕಾರಣ ಮಕ್ಕಳು ಕಾಣೆಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಾನಾ? ನೀನಾ?: ಒಂಟಿ ಸಲಗಕ್ಕೆ ಗೂಳಿ ಗುಟುರು, ಕಾಲ್ಕಿತ್ತ ಗಜರಾಯ!

Last Updated : Jun 22, 2021, 2:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.