ETV Bharat / city

ದ.ಕ.ಜಿಲ್ಲೆಯಲ್ಲೇ ಮೊದಲ ಪ್ರಯೋಗ: ತ್ಯಾಜ್ಯ ಸಂಗ್ರಹ ವಾಹನಕ್ಕೆ ಮಹಿಳಾ ಸಾರಥಿಗಳು - ದಕ್ಷಿಣ ಕನ್ನಡ

ತರಬೇತಿ ಪಡೆದ ಬಳಿಕ ಕಡೇಶ್ವಾಲ್ಯ ಗ್ರಾಮದ ಬೊಳ್ಳಾರು ಮುಂಗೂರು ನಿವಾಸಿ ಪ್ರಮೀಳಾ ಹಾಗೂ ಪೆರ್ಲಾಪು ಮುಂಡಾಳ ನಿವಾಸಿ ಲಕ್ಷ್ಮೀ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾ.ಪಂನ ಸ್ವಚ್ಛ ಸಂಕೀರ್ಣದ ತ್ಯಾಜ್ಯ ಸಂಗ್ರಹಣಾ ವಾಹನದ( waste collection vehicle) ಚಾಲಕಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Dakshina kannada
ತ್ಯಾಜ್ಯ ಸಂಗ್ರಹ ವಾಹನಕ್ಕೆ ಮಹಿಳಾ ಸಾರಥಿಗಳು
author img

By

Published : Nov 12, 2021, 11:04 AM IST

ದಕ್ಷಿಣ ಕನ್ನಡ: ಆಟೋ, ಟ್ಯಾಕ್ಸಿ, ವಿಮಾನ ಚಲಾಯಿಸುವ ಮಹಿಳೆಯರು ಇದ್ದಾರೆ. ಆದರೆ, ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ವಾಹನ (waste collection vehicle) ಚಲಾಯಿಸುವ ಮಹಿಳೆಯರು ವಿರಳ. ದಕ್ಷಿಣ ಕನ್ನಡ(Dakshina kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾ.ಪಂನ ಸ್ವಚ್ಛ ಸಂಕೀರ್ಣದ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ಇಬ್ಬರು ಮಹಿಳೆಯರೇ ಚಾಲಕರು.

ದ.ಕ.ಜಿಲ್ಲೆಯಲ್ಲೇ ಮೊದಲ ಪ್ರಯೋಗ: ತ್ಯಾಜ್ಯ ಸಂಗ್ರಹ ವಾಹನಕ್ಕೆ ಮಹಿಳಾ ಸಾರಥಿಗಳು

ರಾಜ್ಯದ ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲೂ ಸ್ವಚ್ಛ ಸಂಕೀರ್ಣವನ್ನು ನಿರ್ಮಿಸಿ ವಾಹನದ ಮೂಲಕ ತ್ಯಾಜ್ಯ ಸಂಗ್ರಹಣಾ ಕಾರ್ಯ ಕಡ್ಡಾಯಗೊಳಿಸಲಾಗುತ್ತಿದೆ. ಬಹುತೇಕ ಗ್ರಾ.ಪಂಗಳಲ್ಲಿ ಈ ಕಾರ್ಯ ಈಗಾಗಲೇ ಅನುಷ್ಠಾನಗೊಂಡಿದೆ. ದ.ಕ.ಜಿಲ್ಲೆಯಲ್ಲಿ ವಿವಿಧ ಮಹಿಳಾ ಒಕ್ಕೂಟಗಳು ಈ ಕಾರ್ಯವನ್ನು ಮಾಡುತ್ತಿದ್ದು, ಆದರೆ, ಮಹಿಳೆಯರು ವಾಹನ ಚಲಾಯಿಸುತ್ತಿರುವುದು ಇದೇ ಮೊದಲು.

ಕಡೇಶ್ವಾಲ್ಯ ಗ್ರಾ.ಪಂ. ಹಾಗೂ ಅಲ್ಲಿನ ಮಾತೃ ಸಂಜೀವಿನಿ ಒಕ್ಕೂಟವು ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ವಹಿಸುವ ಕುರಿತು ಒಡಂಬಡಿಕೆ ಮಾಡಿಕೊಂಡಿದ್ದು, ಪ್ರಾಯೋಗಿಕ ಕಾರ್ಯಾಚರಣೆ ಆರಂಭಗೊಂಡಿದೆ. ಆರಂಭದ ಹಂತದಲ್ಲಿ ಒಕ್ಕೂಟಕ್ಕೆ ಗ್ರಾ.ಪಂನಿಂದ ತಿಂಗಳಿಗೆ 30 ಸಾವಿರ ರೂ.ಗಳಂತೆ ನೀಡಲಾಗುತ್ತದೆ. ಜತೆಗೆ ತ್ಯಾಜ್ಯ ಸಂಗ್ರಹದ ಕುರಿತು ಶುಲ್ಕ ಸಂಗ್ರಹದ ಕಾರ್ಯವನ್ನೂ ಒಕ್ಕೂಟವೇ ಮಾಡಲಿದೆ.

ತರಬೇತಿ ಪಡೆದು ಚಾಲನಾ ವೃತ್ತಿ ನಿರ್ವಹಣೆ

ಕಡೇಶ್ವಾಲ್ಯ ಗ್ರಾಮದ ಬೊಳ್ಳಾರು ಮುಂಗೂರು ನಿವಾಸಿ ಪ್ರಮೀಳಾ ಹಾಗೂ ಪೆರ್ಲಾಪು ಮುಂಡಾಳ ನಿವಾಸಿ ಲಕ್ಷ್ಮೀ ತರಬೇತಿ ಪಡೆದು ಚಾಲನಾ ವೃತ್ತಿ ನಿರ್ವಹಿಸುತ್ತಿದ್ದಾರೆ. ಪ್ರಮೀಳಾ ಅವರಿಗೆ ದ್ವಿಚಕ್ರ ವಾಹನ ಮಾತ್ರ ಓಡಿಸಲು ತಿಳಿದಿದ್ದು, ಲಕ್ಷ್ಮಿ ಅವರಲ್ಲಿ ಡಿಎಲ್ ಇದ್ದರೂ ಪೂರ್ತಿ ವಾಹನ ಓಡಿಸುವುದು ತಿಳಿದಿರಲಿಲ್ಲ. ತರಬೇತಿ ಪಡೆದ ಬಳಿಕ ಪೂರ್ಣ ಪ್ರಮಾಣದ ಚಾಲಕಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿಗಾರ್, ಪಿಡಿಒ ಸುನೀಲ್, ಮತ್ತು ಕಡೇಶ್ವಾಲ್ಯದ ಸ್ವಚ್ಛ ಸಂಕೀರ್ಣ ನಿರ್ವಹಣೆ ಮಾಡುವ ಮಾತೃಸಂಜೀವಿನಿ ಘಟಕದ ಮುಖ್ಯ ಪುಸ್ತಕ ಬರಹರಾರರಾದ ಮಮತಾ, ಒಕ್ಕೂಟದ ಅಧ್ಯಕ್ಷೆ ಶಾಮಲಾ ಶೆಟ್ಟಿ. ದ.ಕ.ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್ಆರ್ಎಲ್ಎಂ)-ಸಂಜೀವಿನಿ ಮೂಲಕ ಸುಮಾರು 28 ಗ್ರಾ.ಪಂ.ಗಳಲ್ಲಿ ಮಹಿಳೆಯರೇ ಸ್ವಚ್ಛ ಸಂಕೀರ್ಣವನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಸುಮಾರು 59 ಮಂದಿ ಮಹಿಳೆಯರು ತರಬೇತಿ ಪಡೆದು ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಮುಂದೆ ಇನ್ನೂ 30 ಗ್ರಾ.ಪಂ.ಗಳಲ್ಲಿ ಇದೇ ರೀತಿ ಸಂಜೀವಿನಿ ಒಕ್ಕೂಟಗಳ ಮೂಲಕ ಸ್ವಚ್ಛ ಸಂಕೀರ್ಣವನ್ನು ನಿರ್ವಹಣೆ ಮಾಡುವ ಕುರಿತು ದ.ಕ.ಜಿ.ಪಂ.ಸಿದ್ಧತೆ ನಡೆಸುತ್ತಿದೆ. ಕಡೇಶ್ವಾಲ್ಯ ಗ್ರಾ.ಪಂ.ನಲ್ಲಿ ಮಹಿಳೆಯರೇ ಪೂರ್ಣ ಪ್ರಮಾಣದಲ್ಲಿ ವಾಹನದ ಚಾಲಕರಾಗಿ ದುಡಿಯುತ್ತಿದ್ದು, ಇದನ್ನೇ ಮಾದರಿಯಾಗಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಇತರ ಗ್ರಾ.ಪಂ.ಗಳಲ್ಲಿ ಮಹಿಳಾ ಚಾಲಕರನ್ನು ತಯಾರುಗೊಳಿಸುವ ಕುರಿತು ಸಿದ್ಧತೆ ನಡೆಸಲಾಗಿದೆ.

ಸ್ವಇಚ್ಛೆಯಿಂದ ಈ ಕಾರ್ಯದಲ್ಲಿ ತೊಡಗಿದ್ದು, ಪ್ರಸ್ತುತ ಬೆಳಗ್ಗೆ 9.30ರಿಂದ ಮಧ್ಯಾಹ್ನ 2ರ ವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪ್ರಸ್ತುತ ನಾವು ಇಬ್ಬರು ಚಾಲಕಿಯರು ಸೇರಿ ಒಟ್ಟು 4 ಮಂದಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ತ್ಯಾಜ್ಯ ಸಂಗ್ರಹಣಾ ವಾಹನ ಚಾಲನೆ ಯಾವುದೇ ರೀತಿಯಲ್ಲಿ ಕಷ್ಟ ಎನಿಸದೆ ಈ ವೃತ್ತಿ ತೃಪ್ತಿ ನೀಡಿದೆ ಎನ್ನುತ್ತಾರೆ ವಾಹನ ಚಾಲಕಿಯರಾದ ಪ್ರಮೀಳಾ ಹಾಗೂ ಲಕ್ಷ್ಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.