ಮಂಗಳೂರು : ಕೋವಿಡ್ ಹಾಗೂ ಒಮಿಕ್ರಾನ್ ಹಿನ್ನೆಲೆ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅನಗತ್ಯ ಸಂಚಾರ ನಡೆಸಿರುವ ವಾಹನಗಳನ್ನು ಮಂಗಳೂರು ಪೊಲೀಸರು ಸೀಜ್ ಮಾಡಿದ್ದಾರೆ.
ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯ ಓಡಾಟಗಳಿಗೆ ಅವಕಾಶವಿಲ್ಲ ಎಂದು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆ ನಗರದಲ್ಲಿ ಪೊಲೀಸರು ತಪಾಸಣೆಯನ್ನು ಬಿಗಿಗೊಳಿಸಿದ್ದು, ಅನಗತ್ಯ ಓಡಾಟ ಮಾಡುವ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಸೀಜ್ ಆದ ವಾಹನಗಳಲ್ಲಿ ಬಂದವರು ಹಲವರು ಹಾಲು ಕೊಂಡೊಯ್ಯಲು, ತರಕಾರಿ ತರಲು ಹಾಗೂ ಸ್ನೇಹಿತನ ಮನೆಗೆ ಹೋಗಬೇಕು ಎಂಬ ಕಾರಣ ನೀಡಿದ್ದಾರೆ. ಅಲ್ಲದೇ ದಿನ ಪತ್ರಿಕೆಯೊಂದರಲ್ಲಿ ಲಾಕ್ಡೌನ್ ಇಲ್ಲವೆಂದು ಬಂದಿದೆ ಎಂದು ಅದೇ ಪತ್ರಿಕೆಯ ವರದಿಗಾರರೊಂದಿಗೆ ವಾದ ಮಾಡಿರುವ ದೃಶ್ಯವೂ ಕಂಡು ಬಂದಿದೆ.
ನಗರದಲ್ಲಿ ಬೆಳಗ್ಗೆಯಿಂದ ಈವರೆಗೆ ಸುಮಾರು 25ಕ್ಕೂಅಧಿಕ ದ್ವಿಚಕ್ರ ವಾಹನ ಹಾಗೂ ಒಂದು ಕಾರನ್ನು ಸೀಜ್ ಮಾಡಲಾಗಿದೆ. ಜತೆಗೆ ಮಾಸ್ಕ್ ಧರಿಸದವರಿಗೆ ದಂಡ ಕೂಡ ವಿಧಿಸುತ್ತಿದ್ದಾರೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ: ರಾಯಚೂರಿನಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸಂಚಾರ