ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತ ಮಿಥುನ್ ರೈಗೆ ಕೊಲೆ ಬೆದರಿಕೆ ಹಾಕಿ ಘೋಷಣೆ ಕೂಗುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಓರ್ವ ಈ ಘೋಷಣೆ ಹಾಕಿದ್ದು, ಜೊತೆಗಿದ್ದ ಇತರರು ಆತನಿಗೆ ಧ್ವನಿಗೂಡಿಸಿದ್ದಾರೆ. ಮಿಥುನ್ ರೈ ಹೆಸರನ್ನು ಹೇಳಿಯೇ ನೇರವಾಗಿ ಘೋಷಣೆ ಮಾಡಲಾಗಿದೆ. ಮಿಥುನ್ ರೈಗೆ ಬೈದು ಘೋಷಣೆ ಕೂಗಲಾಗಿದೆ. ಘೋಷಣೆ ಕೂಗಿದವರು ಹಿಂದೂ ಸಂಘಟನೆವೊಂದರ ಕಾರ್ಯಕರ್ತರು ಎನ್ನಲಾಗಿದೆ.
ನಮ್ಮ ಸಂಘಟನೆಯ ಸುದ್ದಿಗೆ ಬಂದ್ರೆ ಕೈ- ಕಾಲು ಕಡಿಯುತ್ತೇವೆ. ಅಗತ್ಯಬಿದ್ದರೆ ತಲೆ ಕೂಡಾ ತೆಗೆಯುತ್ತೇವೆ ಎಂದು ಮಿಥುನ್ ರೈಗೆ ಘೋಷಣೆ ಮೂಲಕ ಎಚ್ಚರಿಕೆ ನೀಡಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಲಾಗುತ್ತಿದೆ.