ETV Bharat / city

ಅಂಬೇಡ್ಕರ್​​ ಅನುಯಾಯಿ  ಪಿ.ಡೀಕಯ್ಯ ನಿಧನ - ಬೆಳ್ತಂಗಡಿಯ ಪಿ ಡೀಕಯ್ಯ

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಂಬೇಡ್ಕರ್ ಅನುಯಾಯಿ ಬೆಳ್ತಂಗಡಿಯ ಪಿ.ಡೀಕಯ್ಯ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ

veteran dalit leader and activist Dikayya
ಹಿರಿಯ ಅಂಬೇಡ್ಕರ್​​ ವಾದಿ ಡೀಕಯ್ಯ
author img

By

Published : Jul 8, 2022, 7:01 PM IST

ಮಂಗಳೂರು: ಅಂಬೇಡ್ಕರ್ ಅನುಯಾಯಿ ಬೆಳ್ತಂಗಡಿಯ ಪಿ.ಡೀಕಯ್ಯ(63) ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಡೀಕಯ್ಯ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅವರ ಅಂಗಾಂಗ ದಾನಗಳ ಪ್ರಕ್ರಿಯೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ ಜನಿಸಿದ ಡೀಕಯ್ಯ ಅವರು ದ.ಕ.ಜಿಲ್ಲೆಯಲ್ಲಿ ಅಂಬೇಡ್ಕರ್ ವಾದವನ್ನು ಪ್ರಚುರಪಡಿಸಿದವರು.

ಪಿ.ಡೀಕಯ್ಯ ಅವರು ಬರಹಗಾರರಾಗಿದ್ದು, ತುಳುನಾಡಿನ ಆದಿ ದ್ರಾವಿಡ ಜನಾಂಗದ ಅವಳಿ ವೀರರಾದ ಕಾನದ - ಕಟದರ ಬಗ್ಗೆ ಜಾನಪದೀಯ ಅಧ್ಯಯನವನ್ನು ನಡೆಸಿದ್ದರು. ಅವರು ನಿರಂತರವಾಗಿ ಹಲವಾರು ಪತ್ರಿಕೆಗಳಿಗೆ ಬರೆಯುತ್ತಿದ್ದರು.

ಬಿಎಸ್ಎನ್ಎಲ್​​ನ ನಿವೃತ್ತ ಉದ್ಯೋಗಿಯಾಗಿದ್ದ ಅವರು ಮನ್ಸ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ, ಕುಟುಂಬ ವರ್ಗದವರು ಹಾಗೂ ಅಪಾರ ಬೆಂಬಲಿಗರನ್ನು ಅಗಲಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಕೆರೂರಿನ ಡಾಬಾದ ಮೇಲೆ ದಾಳಿ: ಮಹಿಳೆಯರ ಮೇಲೆ ದೌರ್ಜನ್ಯ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.