ಮಂಗಳೂರು: ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸಂಚಾರ ಮತ್ತು ಅಪರಾಧ ವಿಭಾಗದಲ್ಲಿ ಡಿಸಿಪಿ ಆಗಿದ್ದ ಉಮಾ ಪ್ರಶಾಂತ್, ಇಂದು ಮಂಗಳೂರು ಎಸಿಬಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದರು.
ಇತ್ತೀಚೆಗೆ ಉಮಾ ಪ್ರಶಾಂತ್ ಮಂಗಳೂರು ನಗರ ಕ್ರೈಂ ಪೊಲೀಸ್ ಡಿಸಿಪಿಯಿಂದ ವರ್ಗಾವಣೆ ಹೊಂದಿದ್ದು, ಇಂದು ಮಂಗಳೂರು (ಪಶ್ಜಿಮ ವಲಯ) ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡರು.
ಇದೇ ವೇಳೆ ಮಂಗಳೂರಿನ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಆಗಿ ಲಕ್ಷ್ಮೀ ಗಣೇಶ್ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಈ ಹಿಂದೆ ಬೆಂಗಳೂರಿನಲ್ಲಿ ಲೋಕಾಯುಕ್ತ ಎಸ್ಪಿ ಆಗಿದ್ದರು.