ಮಂಗಳೂರು: ನಗರದ ಸಸಿಹಿತ್ಲು ಮುಂಡ ಬೀಚ್‌ಗೆ ಬಂದಿದ್ದ 9 ಮಂದಿಯಲ್ಲಿ ಇಬ್ಬರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ಘಟನೆ ರವಿವಾರ ನಡೆದಿದೆ. ಇವರಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ.
ಕಾರ್ಕಳದ ಸಾಣೂರು ಮೂಲದ ಸುಂದರ ಶೆಟ್ಟಿ (45) ಮೃತಪಟ್ಟವರು. ದಾಮೋದರ ಎಂಬವರು ಇನ್ನೂ ಪತ್ತೆಯಾಗಿಲ್ಲ. ನಗರದ ಹಳೆಯಂಗಡಿ ಬಳಿಯ ತೋಕೂರಿನ ಮೂಡುಮನೆಗೆ ವಿವಾಹ ಕಾರ್ಯ ನಿಮಿತ್ತ ಶುಕ್ರವಾರ ನಗರಕ್ಕೆ ಆಗಮಿಸಿದ್ದರು. ಇಂದು ಸಂಜೆ ವಿಹಾರಕ್ಕಾಗಿ 11 ಮಂದಿ ಸಸಿಹಿತ್ಲು ಬೀಚ್‌ಗೆ ಬಂದಿದ್ದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ಕುರಿತಂತೆ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ: ಶಶಿಕಲಾ ಜೊಲ್ಲೆ
ಇವರಲ್ಲಿ 9 ಮಂದಿ ನೀರಿಗಿಳಿದಿದ್ದರು. ಇದರಲ್ಲಿ ಮಹಿಳೆಯೋರ್ವರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಅವರನ್ನು ರಕ್ಷಿಸಲು ಮೃತ ಸುಂದರ ಶೆಟ್ಟಿ ಸಹಿತ ಇತರರು ಮುಂದಾಗಿದ್ದರು. ಅಲೆಗಳ ಅಬ್ಬರಕ್ಕೆ ಎಲ್ಲರೂ ನೀರಿನ ಸೆಳೆತಕ್ಕೊಳಗಾಗಿದ್ದರು. ತಕ್ಷಣ ಸ್ಥಳೀಯ ಮೀನುಗಾರರು ರಕ್ಷಣೆಗೆ ಮುಂದಾಗಿ 7 ಮಂದಿಯನ್ನು ರಕ್ಷಿಸಿದ್ದಾಗಿ ಸ್ಥಳೀಯ ಮೀನುಗಾರರು ಮಾಹಿತಿ ನೀಡಿದ್ದಾರೆ.