ETV Bharat / city

ಪಂಜ ನಿವಾಸಿ ಮತ್ತು ಕಡಬದ ಫೋಟೋಗ್ರಾಫರ್​ ಒಬ್ಬರಿಗೆ ಕೊರೊನಾ ಪಾಸಿಟಿವ್

author img

By

Published : Jul 13, 2020, 8:03 PM IST

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಸಮೀಪದ ಗೋಳಿಯಡಿಯ ನಿವಾಸಿ ಮತ್ತು ಕಡಬದ ಫೋಟೋಗ್ರಾಫರ್ ಓರ್ವರಿಗೆ ಕೋವಿಡ್​ ಸೋಂಕು ತಗುಲಿರುವುದು ವರದಿಯಿಂದ ತಿಳಿದು ಬಂದಿದೆ.

two-corona-cases-found-in-dakshina-kannada
ಕೊರೊನಾ ಸೋಂಕು

ಸುಳ್ಯ: ಪಂಜ ಸಮೀಪದ ಗೋಳಿಯಡಿಯ ನಿವಾಸಿಯೊಬ್ಬರಿಗೆ ಮತ್ತು ಕಡಬದ ಫೋಟೋಗ್ರಾಫರ್ ಓರ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಐವತ್ತೊಕ್ಲು ಹಾಗೂ ಕಲ್ಮಡ್ಕ ಗ್ರಾಮಗಳ ನಡುವೆ ಬರುವ ಮುಚ್ಚಿಲ ನಿವಾಸಿಯೊಬ್ಬರು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದು, ಡಯಾಲಿಸಿಸ್​ಗಾಗಿ ಸುಳ್ಯ ತಾಲೂಕು ಆರೋಗ್ಯ ಕೇಂದ್ರಕ್ಕೆ ಹೋಗುತ್ತಿದ್ದರು.

ಸುಳ್ಯ ಆಸ್ಪತ್ರೆ ಸೀಲ್​ಡೌನ್ ಆದ ಕಾರಣ ಮಂಗಳೂರಿನ ಆಸ್ಪತ್ರೆಗೆ ತೆರಳಿರುವ ವೇಳೆ ಅವರ ಗಂಟಲು ದ್ರವ ಮಾದರಿಯ ಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಬಂದಿದ್ದು ಅವರಿಗೆ ಕೊರೊನಾ ದೃಢಪಟ್ಟಿದೆ. ಇದೇ ತರಹ ಕಡಬದಲ್ಲಿ ಫೋಟೋಗ್ರಾಫರ್​ಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಡಬದ ಕೋಡಿಂಬಾಳ ಸಮೀಪದ ಕೊರೊನಾ ಸೋಂಕಿತ ವ್ಯಕ್ತಿಯ ಹಾಗೂ ಗೋಳಿಯಡಿಗೆ ವ್ಯಕ್ತಿಯ ಮನೆಗೆ ಭೇಟಿ ನೀಡಿದ್ದು, ಸೋಂಕಿತರ ಮನೆ ಸೀಲ್ ಡೌನ್ ಮಾಡಿ ಹೋಮ್ ಕ್ವಾರಂಟೈನ್ ಆಗಿರಲು ಮನೆಯವರಿಗೆ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.