ETV Bharat / city

₹ 67,685 ಹಣವಿದ್ದ ಪರ್ಸ್​ ಮರಳಿಸಿ ಪ್ರಾಮಾಣಿಕತೆ ಮೆರೆದ ಕೇರಳಿಗ - ಅಭಿನಂದನೆ

ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದ ರಸ್ತೆಯಲ್ಲಿ ಸಿಕ್ಕ ಪರ್ಸನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಮರಳಿಸಿ ಕೇರಳ ಮೂಲದ ನಾಗರಿಕ ಮತ್ತು ರೈಲ್ವೆ ಪೊಲೀಸರು ಪ್ರಾಮಾಣಿಕತೆ ಮರೆದಿದ್ದಾರೆ.

the-police-who-returned-the-purse
author img

By

Published : Oct 5, 2019, 11:23 PM IST

ಮಂಗಳೂರು: ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದ ರಸ್ತೆಯಲ್ಲಿ ಸಿಕ್ಕ ಪರ್ಸ್​ ಅನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಮರಳಿಸಿ ಕೇರಳ ಮೂಲದ ನಾಗರಿಕ ಮತ್ತು ರೈಲ್ವೆ ಪೊಲೀಸರು ಪ್ರಾಮಾಣಿಕತೆ ಮರೆದಿದ್ದಾರೆ.

ಮಂಗಳೂರಿನ ಮುಹಮ್ಮದ್ ಸಕೀರ್ (28) ಕಳೆದುಕೊಂಡವರು. ಕಾಸರಗೋಡಿನ ಹಿರಿಯ ನಾಗರಿಕ ಜಯಪ್ರಕಾಶ್ ಶೆಣೈ (64) ಪರ್ಸ್ ಮರಳಿಸಿದವರು.

ಅಕ್ಟೋಬರ್​ 4ರಂದು ಬೆಳಿಗ್ಗೆ 8.45ರ ಸುಮಾರಿಗೆ ಶೆಣೈ ಅವರಿಗೆ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಪರ್ಸ್ ಸಿಕ್ಕಿತ್ತು. ಅದರಲ್ಲಿ ₹ 67,685 ನಗದು, ನಾಲ್ಕು ಎಟಿಎಂ ಕಾರ್ಡ್‌, ಎರಡು ಡ್ರೈವಿಂಗ್ ಲೈಸನ್ಸ್‌ಗಳಿದ್ದವು. ಆ ಪರ್ಸ್​ ಅನ್ನು ರೈಲ್ವೆ ಸುರಕ್ಷತಾ ಪಡೆಯ (ಆರ್​ಪಿಎಫ್) ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ಇನ್‌ಸ್ಪೆಕ್ಟರ್ ಅವರು ಪರ್ಸ್‌ನಲ್ಲಿದ್ದ ವಿಳಾಸದ ಮೂಲಕ ಅದರ ವಾರಸುದಾರ ಮುಹಮ್ಮದ್ ಸಕೀರ್ ಅವರನ್ನು ಸಂಪರ್ಕಿಸಿ ಪರ್ಸ್​ ಮರಳಿಸಿದರು. ಈ ಕಾರ್ಯಕ್ಕೆ ಸಕೀರ್ ಪೊಲೀಸರಿಗೆ ಧನ್ಯವಾದ ಹೇಳಿದರು.

ಇದೇ ವೇಳೆ ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ ಕಿಶನ್ ಅವರು ಮನೋಜ್‌ಕುಮಾರ್ ಹಾಗೂ ನಾಗರಿಕ ಜಯಪ್ರಕಾಶ್ ಶೆಣೈ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.

Intro:ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ನಗದು ಹಣ ಮತ್ತು ಇತರ ಹಲವು ದಾಖಲೆಗಳನ್ನು ಒಳಗೊಂಡ ಪರ್ಸ್‌ನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸುವ ಮೂಲಕ ಕೇರಳದ ಹಿರಿಯ ನಾಗರಿಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ರೈಲ್ವೆ ಪೊಲೀಸರು ಅದನ್ನು ವಾರಸುದಾರರಿಗೆ ತಲುಪುವಂತೆ ವ್ಯವಸ್ಥೆ ಮಾಡಿದ್ದಾರೆ.
Body:
ಕಾಸರಗೋಡಿನ ಅಶ್ವಿನಿನಗರದ ಜಯಪ್ರಕಾಶ್ ಶೆಣೈ (64) ಎಂಬವರು ಪರ್ಸನ್ನು ಮರಳಿ ನೀಡಿ ಪ್ರಾಮಾಣಿಕತೆ ಮೆರೆದವರು. ಮಂಗಳೂರು ತಾಲೂಕು ಹರೇಕಳ ಪಂಜಿಮಾಡಿಯ ಮುಹಮ್ಮದ್ ಸಕೀರ್ (28) ಕಳೆದುಕೊಂಡ ಪರ್ಸ್ ಮರಳಿ ಪಡೆದುಕೊಂಡವರು.

ಅ.4ರಂದು ಬೆಳಗ್ಗೆ 8:45ಕ್ಕೆ ಜಯಪ್ರಕಾಶ್ ಶೆಣೈ ಅವರಿಗೆ ಸೆಂಟ್ರಲ್ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಪರ್ಸ್ ಸಿಕ್ಕಿದ್ದು, ಅದರಲ್ಲಿ 67,685 ರೂ. ನಗದು, ನಾಲ್ಕು ಎಟಿಎಂ ಕಾರ್ಡ್‌ಗಳು, ಎರಡು ಡ್ರೈವಿಂಗ್ ಲೈಸನ್ಸ್‌ಗಳಿದ್ದವು. ಅದನ್ನು ಅವರು ಸೆಂಟ್ರಲ್ ರೈಲು ನಿಲ್ದಾಣದ ರೈಲ್ವೆ ಸುರಕ್ಷತಾ ಪಡೆಯ (ಆರ್ ಪಿ ಎಫ್) ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ಇನ್‌ಸ್ಪೆಕ್ಟರ್ ಅವರು ಪರ್ಸ್‌ನಲ್ಲಿದ್ದ ವಿಳಾಸದ ಮೂಲಕ ಅದರ ವಾರಸುದಾರ ಮುಹಮ್ಮದ್ ಸಕೀರ್ ಅವರನ್ನು ಸಂಪರ್ಕಿಸಿ ಪರ್ಸ್ ಸಿಕ್ಕಿರುವ ವಿಷಯ ತಿಳಿಸಿದ್ದರು. 11 ಗಂಟೆ ವೇಳೆಗೆ ಸಕೀರ್ ಆರ್ ಪಿ ಎಫ್ ಕಚೇರಿಗೆ ಭೇಟಿ ನೀಡಿ ಪರ್ಸ್‌ನ ಗುರುತನ್ನು ಪತ್ತೆ ಹಚ್ಚಿದರು. ಸೂಕ್ತ ಪರಿಶೀಲನೆಯ ಬಳಿಕ ಪರ್ಸ್‌ನ್ನು ಸಕೀರ್‌ಗೆ ಮರಳಿಸಲಾಯಿತು.

ಇದೇ ವೇಳೆ ರೈಲು ನಿಲ್ದಾಣದ ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ ಕಿಶನ್ ಸಮಕ್ಷಮ ಆರ್ ಪಿ ಎಫ್ ಇನ್‌ಸ್ಪೆಕ್ಟರ್ ಮನೋಜ್‌ಕುಮಾರ್ ಅವರು ಪ್ರಾಮಾಣಿಕತೆ ಮರೆದ ಹಿರಿಯ ನಾಗರಿಕ ಜಯ ಪ್ರಕಾಶ್ ಶೆಣೈ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.

Reporter; vinodpuduConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.