ಮಂಗಳೂರು: ಬೃಹತ್ ಗಾತ್ರದ ಮಾವಿನ ಮರವೊಂದು ಆಟೊ ರಿಕ್ಷಾವೊಂದರ ಮೇಲೆ ಬಿದ್ದಿದ್ದು, ಡ್ರೈವರ್ನ ಸಮಯ ಪ್ರಜ್ಞೆಯಿಂದ ಐವರು ಪ್ರಾಣಾಪಾಯದಿಂದ ಪಾರಾದ ಘಟನೆ ಕೋಟೆಕಾರ್ ಪಂಚಾಯತ್ ಬಳಿ ಇಂದು ನಡೆದಿದೆ.
ಉಮೇಶ್ ಪೂಜಾರಿ ತನ್ನ ರಿಕ್ಷಾದೊಂದಿಗೆ ತಲಪಾಡಿ ಸಮೀಪದ ಸೋಮೇಶ್ವರ ಬಳಿ ಬಂದಾಗ ಏಕಾಏಕಿ ಬೃಹತ್ ಗಾತ್ರದ ಮಾವಿನ ಮರವೊಂದು ರಿಕ್ಷಾ ಮೇಲೆ ಬಿದ್ದಿದೆ. ಆದರೆ ರಿಕ್ಷಾ ಡ್ರೈವರ್ ಉಮೇಶ್ರವರ ಸಮಯ ಪ್ರಜ್ಞೆಯಿಂದ ರಿಕ್ಷಾದಲ್ಲಿದ್ದ ಇಬ್ಬರು ಮಕ್ಕಳ ಸಹಿತ ಐವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ.