ETV Bharat / city

ಅಕ್ರಮ ಗೋ ಸಾಗಾಟಕ್ಕೆ ತಡೆ: ಮುಸ್ಲಿಂ ಸಮುದಾಯದಲ್ಲೇ ತಂಡ ರೆಡಿ! - undefined

ಕರಾವಳಿಯಲ್ಲಿ ಅಕ್ರಮ ಗೋ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಕಾನೂನು ಬಿಗಿಗೊಳಿಸಿದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅದಲ್ಲದೇ ಅಕ್ರಮ ಗೋ ಸಾಗಾಟದ ಪರಿಣಾಮ ಮುಸ್ಲಿಂ ಸಮುದಾಯದ ಬಗ್ಗೆಯೂ ಕೆಟ್ಟ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಗೋ ಸಾಗಾಟ ಮಾಡುವವರನ್ನು ಪತ್ತೆ ಹಚ್ಚಲು ವಿಶೇಷ ತಂಡವೊಂದು ಸಿದ್ಧವಾಗಿದೆ.

ಮುಸ್ಲಿಂ ಯೂತ್ ಲೀಗ್​ನ ರಾಜ್ಯಾಧ್ಯಕ್ಷ ಸಿದ್ದೀಕ್ ತಲಪಾಡಿ
author img

By

Published : Jun 18, 2019, 9:50 PM IST

ಮಂಗಳೂರು: ಕರಾವಳಿಯಲ್ಲಿ ಅಕ್ರಮ ಗೋ ಸಾಗಾಟಕ್ಕೆ ಪೂರ್ಣವಿರಾಮ ಹಾಕಲು, ಅಕ್ರಮ ಗೋ ಸಾಗಾಟ ಮಾಡುವವರನ್ನು ಪತ್ತೆ ಹಚ್ಚಲು ಮುಸ್ಲಿಂ ಸಮುದಾಯದಲ್ಲೇ ತಂಡವೊಂದು ಸಿದ್ಧವಾಗುತ್ತಿದೆ. ಈ ಮೂಲಕ ತಮ್ಮ ಮೇಲಿರುವ ಆರೋಪವನ್ನು ಕೊನೆಗಾಣಿಸಲು ಮುಸ್ಲಿಂ ಯೂತ್ ಲೀಗ್ ಎಂಬ ಸಂಘಟನೆ ತೀರ್ಮಾನಿಸಿದೆ.

ಈ ಕುರಿತಾಗಿ ಇರುವ ಹಿಂದೂ ಸಂಘಟನೆಗಳ ಮಾದರಿಯ ಗೋರಕ್ಷಕಾ ದಳದಂತೆ 'ಅಕ್ರಮ ಗೋ ಸಾಗಾಟ ವಿರೋಧ ಸಮಿತಿ' ಎಂಬ ಹೆಸರಿನಲ್ಲಿ ಈ ಸಂಘಟನೆ ಕಾರ್ಯಾಚರಿಸಲಿದ್ದು, ಮುಸ್ಲಿಂ ಯೂತ್ ಲೀಗ್‌ ಸಂಘಟನೆಯ ಸದಸ್ಯರು ಈ ಕೆಲಸ ಮಾಡಲು ತೀರ್ಮಾನಿಸಿದ್ದಾರೆ. ಅಲ್ಲದೇ ಈ ಸಂಘಟನೆಯಲ್ಲಿ ಇತರ ಮುಸ್ಲಿಂ ಯುವಕರಿಗೂ ಸದಸ್ಯರಾಗಲು ಅವಕಾಶವಿದೆ. ಈ ತಂಡಗಳು ದ.ಕ ಜಿಲ್ಲೆಯ ವಿವಿಧೆಡೆಯಲ್ಲಿ ನಡೆಯುವ ಅಕ್ರಮ ಗೋ ಸಾಗಾಟ ಪ್ರಕರಣಗಳನ್ನು ಪತ್ತೆ ಹಚ್ಚಿ ಪೊಲೀಸರಿಗೆ ಸಹಕರಿಸುವ ಆಕಾಂಕ್ಷೆ ಹೊಂದಿದೆ.

ಈ ಬಗ್ಗೆ ಮುಸ್ಲಿಂ ಯೂತ್ ಲೀಗ್​ನ ರಾಜ್ಯಾಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ಅಕ್ರಮ ಗೋ ಸಾಗಾಟ, ಸತ್ತ ಗೋವುಗಳ ಮಾಂಸ, ಅಂಗವಿಕಲ ಗೋವುಗಳ ಮಾಂಸ ಭಕ್ಷಣೆ, ಮುಸ್ಲಿಂ ಸಂಸ್ಕೃತಿಯಲ್ಲಿ ನಿಷೇಧಿಸಲ್ಪಟ್ಟಿದೆ. ಆದರೆ ಅಂತಹ ಮಾಂಸಗಳನ್ನು ಅಮಾಯಕ ಮುಸ್ಲೀಮರಿಗೆ ತಿನ್ನಿಸುವ ವಿಚಾರ ಖಂಡನೀಯ. ಆದ್ದರಿಂದ ಜಿಲ್ಲಾಡಳಿತ ಯಾರೆಲ್ಲಾ ಇಂತಹ ಅಕ್ರಮ ಗೋಸಾಗಾಟದಲ್ಲಿ ತೊಡಗುತ್ತಾರೋ, ಅವರಿಗೆ ಕಠಿಣ ಶಿಕ್ಷೆ ನೀಡದ ಕಾರಣ, ಅನಿವಾರ್ಯವಾಗಿ ನಾವು ಬೀದಿಗಿಳಿಯುವ ಪರಿಸ್ಥಿತಿ ಒದಗಿದೆ ಎಂದು ಹೇಳಿದರು.

ಮುಸ್ಲಿಂ ಯೂತ್ ಲೀಗ್​ನ ರಾಜ್ಯಾಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿದರು.

ಜಿಲ್ಲಾದ್ಯಂತ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪ್ರಥಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂಡ ರಚಿಸಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಬಳಿಕ ಇತರ ಜಿಲ್ಲೆಗಳು ಹಾಗೂ ರಾಜ್ಯಾದ್ಯಂತ ಈ ತಂಡವನ್ನು ರಚಿಸುವ ಉದ್ದೇಶ ಇರಿಸಿಕೊಂಡಿದ್ದೇವೆ. ಯಾರೋ ದನ ತುಂಬಿಸಿಕೊಂಡು ಬರುವವನನ್ನು ಹೊಡೆದು ಬಡಿದು ಮಾಡುವುದಕ್ಕಿಂತ ಇದರ ಮೂಲವನ್ನು ಹುಡುಕಿ ಅಲ್ಲಿಯೇ ಹಿಂಸಾತ್ಮಕ ಗೋಸಾಗಾಟ ನಿಲ್ಲಿಸುವ ಉದ್ದೇಶ ನಮ್ಮಲ್ಲಿದೆ ಎಂದು ಸಿದ್ದೀಕ್ ತಲಪಾಡಿ ಹೇಳಿದ್ದಾರೆ.

Intro:ಮಂಗಳೂರು: ಕರಾವಳಿಯಲ್ಲಿ ಅಕ್ರಮ ಗೋ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಯಾವುದೇ ರೀತಿಯಲ್ಲಿ ಕಾನೂನನ್ನು ಬಿಗಿಗೊಳಿಸಿದ್ದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅದಲ್ಲದೆ ಅಕ್ರಮ ಗೋಸಾಗಾಟದ ಪರಿಣಾಮ ಮುಸ್ಲಿಂ ಸಮುದಾಯದ ಬಗ್ಗೆಯೂ ಕೆಟ್ಟ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇವೆಲ್ಲದ್ದಕ್ಕೂ ಪೂರ್ಣವಿರಾಮ ಇಡಲು, ಅಕ್ರಮ ಗೋ ಸಾಗಾಟಗಾರರನ್ನು ಪತ್ತೆ ಹಚ್ಚಲು ಮುಸ್ಲಿಂ ಸಮುದಾಯದಲ್ಲೇ ತಂಡವೊಂದು ಸಿದ್ಧವಾಗುತ್ತಿದೆ. ಇದರ ಮೂಲಕ ತಮ್ಮ ಮೇಲಿರುವ ಆರೋಪವನ್ನು ಕೊನೆಗಾಣಿಸಲು ಮುಸ್ಲಿಂ ಯೂತ್ ಲೀಗ್ ಎಂಬ ಸಂಘಟನೆಯೊಂದು ತೀರ್ಮಾನಿಸಿದೆ.

ಈಗಾಗಲೇ ಇರುವ ಹಿಂದೂ ಸಂಘಟನೆಗಳ ಮಾದರಿಯ ಗೋರಕ್ಷಕಾ ದಳದಂತೆ 'ಅಕ್ರಮ ಗೋ ಸಾಗಾಟ ವಿರೋಧ ಸಮಿತಿ' ಎಂಬ ಹೆಸರಿನಲ್ಲಿ ಈ ಸಂಘಟನೆ ಕಾರ್ಯಾಚರಿಸಲಿದ್ದು, ಮುಸ್ಲಿಂ ಯೂತ್ ಲೀಗ್‌ ಈ ಸಂಘಟನೆಯ ಸದಸ್ಯರು ಮುಂಚೂಣಿಯಲ್ಲಿರುವರು. ಅಲ್ಲದೆ ಈ ಸಂಘಟನೆಯಲ್ಲಿ ಇತರ ಮುಸ್ಲಿಂ ಯುವಕರೂ ಸದಸ್ಯರಾಗಲು ಅವಕಾಶವಿದೆ. ಈ ತಂಡಗಳು ದ.ಕ. ಜಿಲ್ಲೆಯ ವಿವಿಧೆಡೆಯಲ್ಲಿ ನಡೆಯುವ ಅಕ್ರಮ ಗೋ ಸಾಗಾಟಗಳ ಪ್ರಕರಣಗಳನ್ನು ಪತ್ತೆ ಹಚ್ಚಿ ಪೊಲೀಸರಿಗೆ ಸಹಕರಿಸುವ ಆಕಾಂಕ್ಷೆ ಹೊಂದಿರುವರು.

Body:ಈ ಬಗ್ಗೆ ಮುಸ್ಲಿಂ ಯೂತ್ ಲೀಗ್ ನ ರಾಜ್ಯಾಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ಅಕ್ರಮ ಗೋ ಸಾಗಾಟದ, ಸತ್ತ ಗೋವುಗಳ, ಅಂಗ ವಿಕಲ ಗೋವುಗಳ ಮಾಂಸ ಭಕ್ಷಣೆ ಮುಸ್ಲಿಂ ಸಂಸ್ಕೃತಿಗೆ ನಿಷೇಧಿಸ್ಪಟ್ಟದ್ದಾಗಿದೆ. ಆದರೆ ಅಂತಹ ಮಾಂಸಗಳನ್ನು ಅಮಾಯಕ ಮುಸ್ಲಿಮರಿಗೆ ತಿನ್ನಿಸುವ ವಿಚಾರ ಖಂಡನೀಯ. ಆದ್ದರಿಂದ ಜಿಲ್ಲಾಡಳಿತ ಯಾರೆಲ್ಲಾ ಇಂತಹ ಅಕ್ರಮ ಗೋಸಾಗಾಟದಲ್ಲಿ ತೊಡಗುತ್ತಾರೋ, ಅವರಿಗೆ ಕಠಿಣ ಶಿಕ್ಷೆ ನೀಡದ ಕಾರಣ ಅನಿವಾರ್ಯವಾಗಿ ನಾವು ಬೀದಿಗಿಳಿಯುವ ಪರಿಸ್ಥಿತಿ ಒದಗಿದೆ ಎಂದು ಹೇಳಿದರು.

ಅಕ್ರಮ ಗೋ ಸಾಗಾಟ ವಿರೋಧ ಸಮಿತಿ' ಎಂಬ ಸಂಘಟನೆಯನ್ನು ನಾವು ದ.ಕ.ಜಿಲ್ಲೆಯಲ್ಲಿ ಪ್ರಥಮವಾಗಿ ಆರಂಭಿಸುವ ಉದ್ದೇಶ ಹೊಂದಿದೆ. ಈಗಾಗಲೇ ಈ ಬಗ್ಗೆ ರಾಜ್ಯಸರಕಾರ, ರಾಜ್ಯಪಾಲರಿಗೆ, ಜಿಲ್ಲಾಡಳಿತಕ್ಕೆ ಪತ್ರ ಬರೆಯುವಂತಹ ಕೆಲಸ ನಡೆಯುತ್ತಿದೆ. ಇನ್ನೊಂದು ಧರ್ಮವನ್ನು ನೋಯಿಸಿ, ಮುಸ್ಲಿಮರಿಗೆ ಆಗಬೇಕಾದ್ದುದು ಏನೂ ಇಲ್ಲ. ಆದ್ದರಿಂದ ಒಂದಿಬ್ಬರ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸುವುದು ತಪ್ಪು. ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಬೇಕು‌. ಇತ್ತೀಚೆಗೆ ಅಮಿತ್ ಶಾ ಅವರು ಇಡೀ ದೇಶಾದ್ಯಂತ ಗೋಮಾಂಸವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ‌. ಇದರಿಂದ ನಾವು ವ್ಯಾಪಾರವನ್ನು ಮಾಡತ್ತೇವೆ, ಅಲ್ಪಸಂಖ್ಯಾತರನ್ನು ಮರ್ದಿಸುತ್ತಲೂ ಇರುತ್ತೇವೆ ಎಂಬ ಉದ್ದೇಶ ಕಾಣುತ್ತದೆ. ಆದ್ದರಿಂದ ನಾವೇ ಬೀದಿಗಿಳಿದು ಇಂತಹ ಕೃತ್ಯವನ್ನು ತಡೆದು ಅಕ್ರಮ ಗೋ ಸಾಗಾಟಗಾರರಿಗೆ ಬುದ್ಧಿವಾದ ಹೇಳುವ ಕೆಲಸ ಮಾಡುತ್ತೇವೆ‌. ಇಲ್ಲದಿದ್ದರೆ ಪೊಲೀಸರಿಗೆ ನಾವು ಅವರನ್ನು ಹಿಡಿದು ಕೊಡುತ್ತೇವೆ ಎಂದು ಹೇಳಿದರು.

Conclusion:ನಮ್ಮ ಖಾಜಿಗಳಾದ ಉಡುಪಿಯ ಬೇಕಲ್ ಉಸ್ತಾದ್ ಅವರು ಅಕ್ರಮ ಗೋಸಾಗಾಟ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದ್ದು, ಅವರು ಕ್ಷಮೆಗೆ ಅರ್ಹರಲ್ಲ ಎಂದಿದ್ದಾರೆ. ಹಾಗೆಯೇ ದ‌.ಕ. ಜಿಲ್ಲೆಯ ತ್ವಾಕ ಖಾಜಿಯವರು ನಮ್ಮನ್ನು ಬೆನ್ನುತಟ್ಟಿದ್ದು, ಹರಾಂ ಮಾಂಸವನ್ನು ಮುಸ್ಲಿಮರಿಗೆ ತಿನ್ನಿಸುವ ಕೆಲಸ ನಿಲ್ಲಿಸಬೇಕು ಎಂದಿದ್ದಾರೆ. ಆದ್ದರಿಂದ ಜಿಲ್ಲಾದ್ಯಂತ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಪ್ರಥಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂಡ ರಚಿಸಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಬಳಿಕ ಇತರ ಜಿಲ್ಲೆಗಳು ಹಾಗೂ ರಾಜ್ಯಾದ್ಯಂತ ಈ ತಂಡವನ್ನು ರಚಿಸುವ ಉದ್ದೇಶ ಇರಿಸಿಕೊಂಡಿದ್ದೇವೆ. ಯಾರೋ ದನ ತುಂಬಿಸಿಕೊಂಡು ಬರುವವನನ್ನು ಹೊಡೆದು ಬಡಿದು ಮಾಡುವುದಕ್ಕಿಂತ ಇದರ ಮೂಲ ಎಲ್ಲಿದೆ ಅದನ್ನು ಹುಡುಕಿ ಅಲ್ಲಿಯೇ ಹಿಂಸಾತ್ಮಕ ಗೋಸಾಗಾಟ ನಿಲ್ಲಿಸುವ ಉದ್ದೇಶ ನಮ್ಮಲ್ಲಿದೆ ಎಂದು ಸಿದ್ದೀಕ್ ತಲಪಾಡಿ ಹೇಳಿದರು.

Reporter_Vishwanath Panjimogaru

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.