ETV Bharat / city

ಮಳಲಿ ಮಸೀದಿಯಲ್ಲಿ ಗುರುಮಠ, ಶಿವ, ದೇವಿ ಸಾನಿಧ್ಯ ಗೋಚರ; ಅಷ್ಟಮಂಗಲ ನಡೆಸಲು ಸೂಚನೆ - ತಾಂಬೂಲ ಪ್ರಶ್ನೆ ಮುಕ್ತಾಯ

ತಾಂಬೂಲ ಪ್ರಶ್ನೆಯಲ್ಲಿ, ಪುರಾತನ ಕಾಲದಲ್ಲಿ ಗುರು‌ಮಠ ಇದ್ದ ಬಗ್ಗೆ ಗೋಚರವಾಗಿದ್ದು ಶಿವ, ದೇವಿ ಸಾನಿಧ್ಯ ಇತ್ತು ಎಂದು ತಿಳಿದುಬಂದಿದೆ.

Tambula Prashne has Finished
ತಾಂಬೂಲ ಪ್ರಶ್ನೆ ಮುಕ್ತಾಯ
author img

By

Published : May 25, 2022, 12:06 PM IST

Updated : May 25, 2022, 12:38 PM IST

ಮಂಗಳೂರು: ಮಂಗಳೂರಿನ ಹೊರವಲಯದಲ್ಲಿರುವ ಗಂಜಿಮಠದ ಬಳಿಯ ಮಳಲಿ ಮಸೀದಿ ನವೀಕರಣ ವೇಳೆ ದೇಗುಲ ಶೈಲಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಡೆದ ತಾಂಬೂಲ ಪ್ರಶ್ನೆ ಮುಕ್ತಾಯವಾಗಿದ್ದು, ಅಷ್ಟಮಂಗಲ ನಡೆಸಲು ಸೂಚಿಸಲಾಗಿದೆ. ಮಳಲಿಯ ಶ್ರೀರಾಮಂಜನೇಯ ಭಜನಾ ಮಂದಿರದಲ್ಲಿ ಇಂದು ಬೆಳಗ್ಗೆ 9.05ಕ್ಕೆ ಕೇರಳದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಅವರು ತಾಂಬೂಲ ಪ್ರಶ್ನೆ ನಡೆಸಿಕೊಟ್ಟರು. 10.30 ರ ಸುಮಾರಿಗೆ ತಾಂಬೂಲ ಪ್ರಶ್ನೆ ಮುಕ್ತಾಯವಾಗಿದೆ.

ಈ ತಾಂಬೂಲ ಪ್ರಶ್ನೆಯಲ್ಲಿ ಪುರಾತನ ಕಾಲದಲ್ಲಿ ಗುರು‌ಮಠ ಇದ್ದ ಬಗ್ಗೆ ಗೋಚರವಾಗಿದ್ದು, ಶಿವ, ದೇವಿ ಸಾನಿಧ್ಯ ಇತ್ತು ಎಂಬುದು ತಿಳಿದುಬಂದಿದೆ. ಹಿಂದಿನ ಕಾಲದಲ್ಲಿ ನಡೆದ ವಿವಾದ (ವೈಷ್ಣವ ಮತ್ತು ಶೈವ) ದಿಂದ ಇದು ನಾಶವಾಗಿದೆ. ಆ ಸಂದರ್ಭದಲ್ಲಿ ಅಲ್ಲಿ ಆರಾಧನೆ ಮಾಡುತ್ತಿದ್ದವರು ಅಲ್ಲಿಂದ ಸ್ಥಳಾಂತರ ಮಾಡಿದ್ದಾರೆ. ಆದರೆ ಪೂರ್ತಿಯಾಗಿ ಇಲ್ಲಿಂದ ಸಾನಿಧ್ಯ ಹೋಗಿಲ್ಲ. ಈ ಹಿನ್ನೆಲೆಯಲ್ಲಿ ಅದು ಈಗ ಗೋಚರಕ್ಕೆ ಬಂದಿದೆ. ಇದನ್ನು ಎಲ್ಲರೂ ಒಟ್ಟಾಗಿ ಸೇರಿ ಸೌಹಾರ್ದಯುತವಾಗಿ ಜೀರ್ಣೋದ್ಧಾರ ಮಾಡಬೇಕು. ದೇವಾಲಯದ ಎಲ್ಲಾ ವಿಚಾರಗಳು ತಿಳಿಯಲು ಅಷ್ಟಮಂಗಲ ಇಡಬೇಕು. ಇದಕ್ಕಾಗಿ ಗಣಪತಿ ಹವನ, ಪೊಳಲಿಯಲ್ಲಿ ಪ್ರಾರ್ಥನೆ, ನಾರಾಯಣ ಸ್ವಾಮಿ ಮಠದಲ್ಲಿ ಪ್ರಾರ್ಥನೆ ಸೇವೆ ಮತ್ತು ವೃತವನ್ನು ಮಾಡಿದ ಬಳಿಕ ಅಷ್ಟಮಂಗಲ ನಡೆಸುವಂತೆ ತಿಳಿದುಬಂದಿದೆ.

ತಾಂಬೂಲ ಪ್ರಶ್ನೆ ನಂತರ ಮಾತನಾಡಿದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಹಾಗೂ ಶರಣ್​ ಪಂಪ್​ವೆಲ್​

ತಾಂಬೂಲ ಪ್ರಶ್ನೆ ಮುಗಿದ ಬಳಿಕ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್​ವೆಲ್, ದೇಗುಲ ಶೈಲಿ ಪತ್ತೆಯಾದ ಬೆನ್ನಿಗೆ ಇದು ದೇವಸ್ಥಾನ ಎಂದು ಹೇಳಿದ್ದೆವು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿಯನ್ನೂ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಇಂದು ತಾಂಬೂಲ ಪ್ರಶ್ನೆ ಇಡಲಾಗಿದ್ದು, ಅಲ್ಲಿ ದೇವತಾ ಸಾನಿಧ್ಯ ಇತ್ತು ಎಂಬುದು ಬೆಳಕಿಗೆ ಬಂದಿದೆ. ಅಷ್ಟಮಂಗಲದಲ್ಲಿ ಎಲ್ಲಾ ವಿಚಾರ ತಿಳಿಯಲಿದೆ. ದೇವತಾ ಸಾನಿಧ್ಯ ಉಳಿಸಲು ಮುಂದಿನ ಹೋರಾಟ ನಡೆಸಲಿದ್ದೇವೆ. ಈ ಜಾಗವನ್ನು ನಮಗೆ ಬಿಟ್ಟು ಕೊಡಿ ಎಂದು ನಾವು ಮಸೀದಿ ಆಡಳಿತ ಮಂಡಳಿಯವರಿಗೆ ವಿನಂತಿಸುತ್ತಿದ್ದೇವೆ ಎಂದರು.

ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ವಿಹಿಂಪ, ಬಜರಂಗದಳ ಮುಖಂಡರು, ಶಾಸಕ ಭರತ್ ಶೆಟ್ಟಿ, ಗುರುಪುರ ಮಠಾಧೀಶ ಶ್ರೀರಾಜಶೇಖರನಂದ ಸ್ವಾಮೀಜಿ ಭಾಗಿಯಾಗಿದ್ದರು.

ಇದನ್ನೂ ಓದಿ: ಮಳಲಿ ಮಸೀದಿಯಲ್ಲಿ ದೇಗುಲ ಕುರುಹು ಪತ್ತೆ: ಕೇರಳದ ದೈವಜ್ಞರಿಂದ ತಾಂಬೂಲ ಪ್ರಶ್ನೆ ಆರಂಭ

Last Updated : May 25, 2022, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.