ETV Bharat / city

ಮಂಗಳೂರು: ಹೆಡ್ ಕಾನ್​ಸ್ಟೇಬಲ್ ಮೇಲೆ ತಲ್ವಾರ್‌ನಿಂದ​ ದಾಳಿ - mangalore Talwar attack news

ಪೊಲೀಸ್‌ ಹೆಡ್‌ಕಾನ್‌ಸ್ಟೇಬಲ್ ಕರ್ತವ್ಯದಲ್ಲಿದ್ದ ಸಂದರ್ಭ ದುಷ್ಕರ್ಮಿಯೋರ್ವ ಅವರ ಮೇಲೆ ತಲ್ವಾರ್ ಮೂಲಕ ದಾಳಿ ನಡೆಸಿದ ಘಟನೆ ಮಂಗಳೂರಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡ ಪೊಲೀಸ್‌ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರು
ಮಂಗಳೂರು
author img

By

Published : Dec 16, 2020, 3:15 PM IST

ಮಂಗಳೂರು: ದುಷ್ಕರ್ಮಿಯೋರ್ವ ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್ ಮೇಲೆ ಹಾಡಹಗಲೇ ತಲ್ವಾರ್ ದಾಳಿ ನಡೆಸಿದ ಘಟನೆ ಮಂಗಳೂರಿನ ರಥಬೀದಿ ಸಮೀಪದ ಚಿತ್ರಮಂದಿರವೊಂದರ ಬಳಿ‌ ನಡೆದಿದೆ.

ಬಂದರ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಗಣೇಶ ಕಾಮತ್ ತಲ್ವಾರ್ ದಾಳಿಗೊಳಗಾದವರು. ಗಣೇಶ್‌ ಅವರು ಇಬ್ಬರು ಸಿಬ್ಬಂದಿಯೊಂದಿಗೆ ವಾಹನಗಳ ತಪಾಸಣೆಯಲ್ಲಿ‌ ನಿರತರಾಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೋರ್ವ ಅವರ‌ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾನೆ.

ಗಣೇಶ್ ಕಾಮತ್ ಅವರ ಕೈಗೆ ಬಲವಾದ ಏಟು ಬಿದ್ದಿದ್ದು, ಕೂಡಲೇ ಅವರನ್ನು ನಗರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಲ್ಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಸ್ಥಳಕ್ಕೆ ಮಂಗಳೂರು ಉತ್ತರ (ಬಂದರ್) ಪೊಲೀಸರು‌ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.