ETV Bharat / city

ಸ್ಟಾಫ್​ ನರ್ಸ್ ಕುಟುಂಬವನ್ನ ಮಂಗಳೂರಿಗೆ ಕೆಲಸಕ್ಕೆ ಕರೆಸಿ ಹೋಂ ಕ್ವಾರಂಟೈನ್​ ಆರೋಪ - ಮಂಗಳೂರು ಸುದ್ದಿ

ರಜೆಯ ಹಿನ್ನೆಲೆ ಮನೆಗೆ ಹೋಗಿದ್ದ ಮಂಗಳೂರಿನ ಖಾಸಗಿ ಆಸ್ಪತ್ರೆಯ ಸ್ಟಾಫ್​ ನರ್ಸ್​ ಲಿನೇಶ್ ಹಾಗೂ ಅವರ ಕುಟುಂಬದವರನ್ನ ಕೆಲಸಕ್ಕೆಂದು ಪುನಃ ಕರೆಸಿಕೊಂಡಿದ್ದ ಆಸ್ಪತ್ರೆಯ ಆಡಳಿತ ಮಂಡಳಿ ಏಕಾಏಕಿ ಅವರನ್ನ ಹೋಂ ಕ್ವಾರಂಟೈನ್​ನಲ್ಲಿ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Staff nurse at home, called to work in the family's Mangalore home
ಮನೆಯಲ್ಲಿದ್ದ ಸ್ಟಾಫ್​ ನರ್ಸ್,ಕುಟುಂಬವನ್ನ ಮಂಗಳೂರಿಗೆ ಕೆಲಸಕ್ಕೆ ಕರೆಸಿ ಹೋಂ ಕ್ವಾರಂಟೈನ್​
author img

By

Published : Apr 22, 2020, 12:02 PM IST

ಮಂಗಳೂರು: ನಗರ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್​ ನರ್ಸ್​ ಆಗಿ ಕೆಲಸ ಮಾಡಿಕೊಂಡಿದ್ದ ಲಿನೇಶ್ ಹಾಗೂ ಅವರ ಕುಟುಂಬದವರನ್ನ ಕುತಂತ್ರದಿಂದ ಹೋಂ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸ್ಟಾಫ್​ ನರ್ಸ್ ಕುಟುಂಬವನ್ನ ಮಂಗಳೂರಿಗೆ ಕೆಲಸಕ್ಕೆ ಕರೆಸಿ ಹೋಂ ಕ್ವಾರಂಟೈನ್ ಆರೋಪ​

ಲಿನೇಶ್​ ರಜೆ ಹಿನ್ನೆಲೆಯಲ್ಲಿ ಕಡಬದ ನೂಜಿಬಾಳ್ತಿಲ ಗ್ರಾಮದಲ್ಲಿರುವ ತನ್ನ ಮನೆಗೆ ಸ್ವಂತ ವಾಹನದಲ್ಲಿ ಬಂದಿದ್ರು. ಮನೆಯಲ್ಲಿದ್ದ ಇವರನ್ನ ತುರ್ತಾಗಿ ಕೆಲಸಕ್ಕೆ ಪುನಃ ಹಾಜರಾಗುವಂತೆ ಆಸ್ಪತ್ರೆಯಿಂದ ಕರೆಸಲಾಗಿತ್ತಂತೆ. ಅದರಂತೆ ಲಿನೇಶ್​, ಅವರ ಗರ್ಭಿಣಿ ಪತ್ನಿ ಹಾಗೂ ನಾಲ್ಕು ವರ್ಷದ ಮಗುವಿನೊಂದಿಗೆ ಕಡಬದಿಂದ ಮಂಗಳೂರಿಗೆ ಬಂದಿದ್ದಾರೆ. ಆದರೆ, ಅವರು ಮಂಗಳೂರಿನ ರೂಂಗೆ ತಲುಪಿದ ನಂತರ ಏಕಾಏಕಿ ಇವರಿಗೆ ಕರೆ ಮಾಡಿದ ಆಸ್ಪತ್ರೆಯ ಆಡಳಿತ ಮಂಡಳಿ, ನೀವು ಕಡಬದಿಂದ ಬಂದಿರುವುದರಿಂದ ಕೂಡಲೇ ಹೋಂ ಕ್ವಾರಂಟೈನ್​ನಲ್ಲಿ ಇರಬೇಕೆಂದು ಸೂಚಿಸಿದೆಯಂತೆ. ಮಾತ್ರವಲ್ಲದೆ ತಮ್ಮೊಂದಿಗೆ ಯಾರೊಬ್ಬರೂ ಬೆರೆಯಬಾರದೆಂದು ಆಸ್ಪತ್ರೆಯಲ್ಲಿನ ಉಳಿದ ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಲಿನೇಶ್​ ಆರೋಪಿಸಿದ್ದಾರೆ.

ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳು ಲಿನೇಶ್​ ಮನೆ ಬಾಗಿಲಿಗೆ ಕ್ವಾರಂಟೈನ್ ಭಿತ್ತಿಪತ್ರ ಅಂಟಿಸಿ ಹೋಗಿದ್ದಾರೆ. ಇದರಿಂದ ತನ್ನ ಗರ್ಭಿಣಿ ಪತ್ನಿಯ ಚಿಕಿತ್ಸೆ ಸೇರಿದಂತೆ ತನ್ನ ಪುಟ್ಟ ಮಗುವಿನ ಸ್ಥಿತಿ ನೆನೆದು ಲಿನೇಶ್ ಆತಂಕಕ್ಕೀಡಾಗಿದ್ದಾರೆ. ಯಾವ ಕಾರಣದಿಂದಾಗಿ ತಮ್ಮನ್ನು ಏಕಾಏಕಿ ಹೋಂ ಕ್ವಾರಂಟೈನ್​ ಮಾಡಲಾಗಿದೆ ಎಂಬುದು ಮಾತ್ರ ತಿಳಿದಿಲ್ಲ. ಕೆಲಸ ನಿಮಿತ್ತ ಬಂದಿರುವುದರಿಂದ ತಮಗೆ ಬೇಕಾದ ಆಹಾರ ವಸ್ತುಗಳನ್ನೂ ಈ ಕುಟುಂಬ ಸಂಗ್ರಹಿಸಿಲ್ಲ. ಆ ಕಡೆ ಕೆಲಸನೂ ಇಲ್ಲ. ಈ ಕಡೆ ತನ್ನ ಗರ್ಭಿಣಿ ಪತ್ನಿಯೊಂದಿಗೆ ಊರಿಗೂ ಹೋಗುವ ಹಾಗೆಯೂ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.