ETV Bharat / city

ಉಳ್ಳಾಲಕ್ಕೆ ಬಂದ ಸೋನು ಸೂದ್ ಫೌಂಡೇಶನ್ ಆಕ್ಸಿಜನ್​ ಪ್ಲಾಂಟ್​​: ಜಿಲ್ಲಾಡಳಿತದ ಸ್ವಾಗತ - ಉಳ್ಳಾಲ ಸೋನು ಸೂದ್ ಫೌಂಡೇಶನ್ ಆಕ್ಸಿಜನ್​ ಪ್ಲಾಂಟ್

ಕೋವಿಡ್​ ಸಂಕಷ್ಟದ ಪರಿಸ್ಥಿತಿಗೆ ಸಹಾಯ ಹಸ್ತ ಚಾಚಿರುವ ನಟ ಸೋನು ಸೂದ್​​ ತಮ್ಮ ಫೌಂಡೇಶನ್, ಇಂದು ಉಳ್ಳಾಲಕ್ಕೆ ಆಕ್ಸಿಜನ್​ ಪ್ಲಾಂಟ್​ ಕಳುಹಿಸಿಕೊಟ್ಟಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ಆಮ್ಲಜನಕ ಘಟಕವನ್ನು ಸ್ವಾಗತಿಸಲಾಯಿತು.

sonu-sud-foundation-sent-oxygen-plant-to-ullala
ಸೋನು ಸೂದ್ ಫೌಂಡೇಶನ್ ಆಕ್ಸಿಜನ್​ ಪ್ಲಾಂಟ್​​
author img

By

Published : Aug 19, 2021, 9:14 PM IST

ಉಳ್ಳಾಲ: ಸೋನು ಸೂದ್ ಫೌಂಡೇಶನ್​​​ನಿಂದ ಜಿಲ್ಲೆಗೆ ಬಂದ ಆಮ್ಲಜನಕ ಘಟಕವನ್ನು ದ.ಕ ಜಿಲ್ಲಾಡಳಿತ ನೇತೃತ್ವದಲ್ಲಿ ನಗರಸಭೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ಸ್ವಾಗತಿಸಿದರು.

ಉಳ್ಳಾಲಕ್ಕೆ ಬಂದ ಸೋನು ಸೂದ್ ಫೌಂಡೇಶನ್ ಆಕ್ಸಿಜನ್​ ಪ್ಲಾಂಟ್

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ, ಈ ಯೋಜನೆಯಿಂದ ಜನತೆಗೆ ಬಹಳಷ್ಟು ಸಹಕಾರಿಯಾಗಲಿದೆ. ಉಳ್ಳಾಲ ಭಾಗಕ್ಕೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಹೊರಗಿನಿಂದ ತರುವಂತಹ ಕೆಲಸ ಇರುವುದಿಲ್ಲ. ನಿತ್ಯ 30 - 40 ಆಕ್ಸಿಜನ್ ಸಿಲಿಂಡರ್​ಗಳ ನಿರ್ಮಾಣ ಉಳ್ಳಾಲದಲ್ಲಿ ನಡೆಸುವಂತಹ ಸಾಮರ್ಥ್ಯವನ್ನ ಪ್ಲಾಂಟ್​ ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿಗೆ ವಿಡಿಯೋ ಕಾಲ್ ಮಾಡಿದ ನಟ ಸೋನು ಸೂದ್​

ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಪ್ಲಾಂಟ್​ ಯಂತ್ರ ತಲುಪುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅವರಿಗೆ ನಟ ಸೋನು ಸೂದ್ ವಿಡಿಯೋ ಕರೆ ಮಾಡಿದರು. ಸೋನು ಭಾಯ್ ಥ್ಯಾಂಕ್ಯೂ, 16ನೇ ಪ್ಲಾಂಟ್ ಅನ್ನು ಜಿಲ್ಲೆಗೆ ನೀಡಿರುವ ತಮಗೆ ಉಳ್ಳಾಲ ಹಾಗೂ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಎಂದು ಡಿಸಿ ತಿಳಿಸಿದರು. ನಟ ಸೂದ್ ಮಾತನಾಡಿ ಜನ ಪ್ಲಾಂಟ್​​​​​​​​​ ವಿನಿಯೋಗ ಮಾಡಿಕೊಳ್ಳಲಿ. ಜನತೆಯ ಸಹಾಯಕ್ಕೆ ಸೂದ್ ಫೌಂಡೇಶನ್ ಸದಾ ಸಿದ್ದವಿರುತ್ತದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.