ಮಂಗಳೂರು: ಸ್ಯಾಂಡಲ್ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಶುಭಾ ಪೂಂಜಾ ಅವರು ತಮ್ಮ ಗೆಳೆಯನ ಜೊತೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಗೆಳೆಯ ಸುಮಂತ್ ಬಿಲ್ಲವ ಜೊತೆ ದೇವಸ್ಥಾನದ ಮುಂಭಾಗ ನಿಂತು ತೆಗೆಸಿಕೊಂಡ ಫೋಟೋವನ್ನು ಶುಭಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, 'ಧರ್ಮಸ್ಥಳ ದರ್ಶನ' ಎಂದು ಬರೆದು ಕೊಂಡಿದ್ದಾರೆ.
- " class="align-text-top noRightClick twitterSection" data="
">
ಬಿಗ್ಬಾಸ್ ಶೋ ಮುಗಿದ ಬಳಿಕ ಶುಭಾ ಪೂಂಜಾ ತಮ್ಮ ಕುಟುಂಬದೊಂದಿಗೆ ಸಂತಸದಿಂದ ಸಮಯ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೇ, ಪವಿತ್ರ ಧಾರ್ಮಿಕ ಕ್ಷೇತ್ರಗಳಿಗೆ ತನ್ನ ಭಾವಿ ಪತಿ ಜತೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಸುಮಂತ್ಗೆ ಶುಭಾ ಪ್ರೀತಿಯಿಂದ ಚಿನ್ನಿ ಬಾಂಬ್ ಎಂದು ಕರೆಯುತ್ತಾರೆ.
ಇನ್ನು ಶುಭಾ ಅವರು ಶೇರ್ ಮಾಡಿರುವ ಈ ಫೋಟೋಗೆ ಅಭಿಮಾನಿಗಳು ಕಮೆಂಟ್ ಮೂಲಕ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.