ಮಂಗಳೂರು: ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ನಗರದ ಪಡೀಲ್ ಸಮೀಪ ಶ್ರಮಿಕ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ತಿರುವೂರಿನಿಂದ ಜೈಪುರಕ್ಕೆ ಹೋಗುವ ಶ್ರಮಿಕ್ ಎಕ್ಸ್ಪ್ರೆಸ್ ರೈಲು ಪಡೀಲ್ ಸಮೀಪ ಹಳಿ ತಪ್ಪಿದ್ದು, ಗಂಡಾಂತರದಿಂದ ಪಾರಾಗಿದೆ. ರೈಲಿನಲ್ಲಿದ್ದವರನ್ನು ಬೆಳ್ಳಂಬೆಳಗ್ಗೆ 4.30 ಸುಮಾರಿಗೆ ಬದಲಿ ರೈಲಿನ ಮೂಲಕ ಕಳುಹಿಸಿಕೊಡಲಾಗಿದೆ. ಹಳಿ ತಪ್ಪಿದ ರೈಲು ಸರಿ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.