ಮಂಗಳೂರು: ನಗರದ ಪುರಭವನದ ಮಿನಿ ಸಭಾಂಗಣದಲ್ಲಿ, ಬಡ ಮುಸ್ಲಿಂ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯ್ತು
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಹೊಲಿಗೆ ಯಂತ್ರವನ್ನು ಬಡ ಮಹಿಳೆಯರಿಗೆ ನೀಡಿ, ಅವರು ಸಂತೃಪ್ತ ಜೀವನ ನಡೆಸಬೇಕೆಂಬ ಚಿಂತನೆಯೊಂದಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿಯವರು ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಬಹಳಷ್ಟು ಬಡ ಮಹಿಳೆಯರ ಕಷ್ಟ ಗುರುತಿಸಿ ಅವರ ಕಣ್ಣೀರು ಒರೆಸುವ ಕೆಲಸ ಈಗ ಆಗುವುದು ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಅಂತಹ ಮಹಿಳೆಯರನ್ನು ಆಯ್ಕೆ ಮಾಡಿ, ಅವರು ಸ್ವಂತ ದುಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಈ ಹೊಲಿಗೆ ಯಂತ್ರ ನೀಡಲಾಗಿದೆ. ಸರ್ಕಾರ ಹಾಗೂ ಹಲವಾರು ಸಂಘ - ಸಂಸ್ಥೆಗಳು ಈ ರೀತಿಯ ಹಲವಾರು ಯೋಜನೆಗಳನ್ನು ನೀಡುತ್ತಿವೆ. ಅವೆಲ್ಲದರ ಸದುಪಯೋಗವನ್ನು ಮಹಿಳೆಯರು ಮಾಡಬೇಕು. ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಲ್ಲಿ ಮುಸ್ಲಿಂ ಕಮಿಟಿಯಂತಹ ಸಂಸ್ಥೆಗಳ ಸಾಧನೆ ಬಹಳಷ್ಟು ಮುಖ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 70 ಮಂದಿ ಬಡ ಮುಸ್ಲಿಂ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಯಿತು.